‘ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲ, ಇನ್ನು ಜನಸಾಮಾನ್ಯರ ಗತಿಯೇನು..?’

ಈ ಸುದ್ದಿಯನ್ನು ಶೇರ್ ಮಾಡಿ

Ashok

ಬೆಂಗಳೂರು,ಜ.22-ಕರ್ನಾಟಕದಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲ…! ಮೊದಲು ಪೊಲೀಸರನ್ನು ಕಂಡರೆ ರೌಡಿಗಳು ಹೆದರಿ ಓಡುತ್ತಿದ್ದರು… ಆದರೆ ಇಂದು ಎಸಿಪಿ ಅವರ ಮನೆಗೆ ನುಗ್ಗಿ ಅವರ ಮುಂದೆಯೇ ಪತ್ನಿಯ ಸರ ಕಿತ್ತುಕೊಂಡು ಹೋಗಿದ್ದಾರೆ. ಪೊಲೀಸರ ಮನೆಗೇ ಭದ್ರತೆ ಇಲ್ಲ ಅಂದರೆ ಜನಸಾಮಾನ್ಯರಿಗೆ ರಕ್ಷಣೆ ಎಲ್ಲಿ…? ಎಂದು ಮಾಜಿ ಗೃಹ ಸಚಿವ ಆರ್.ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಸಿಟಿ ಹೆಗ್ಗಳಿಕೆಗೆ ಪಾತ್ರವಾಗಿದ್ದ ಉದ್ಯಾನನಗರಿ ಇಂದು ಅಪರಾಧ ಸಿಟಿಯಾಗಿ ಮಾರ್ಪಡುತ್ತಿದೆ. ಅಪಹರಣ, ಮಹಿಳೆ-ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಬಂದಿದೆ ಎಂದರು. ರಾಜ್ಯದಲ್ಲಿ ಪೊಲೀಸರಿಗೆ ರಕ್ಷಣೆಯಿಲ್ಲ. ಇದು ಬಹಳ ಶೋಚನೀಯ ವಿಷಯ. ಗೂಂಡಾಗಳು ಬೆಂಗಳೂರನ್ನು ನಡೆಸುತ್ತಿದ್ದಾರೋ ಗೊತ್ತಿಲ್ಲ. ಸಂಕ್ರಾಂತಿ ದಿನ ಐದು ಕಡೆ ಸರಗಳ್ಳತನ ಪ್ರಕರಣಗಳು ನಡೆದಿವೆ.

ಮೊದಲು ಪೊಲೀಸರನ್ನು ಕಂಡರೆ ಪೊಲೀಸರು ಹೆದರಿ ಓಡಿ ಹೋಗುತ್ತಿದ್ದರು. ಈಗ ರಾಜಾರೋಷವಾಗಿ ಅವರ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಾರೆ ಎಂದರೆ ರಾಜ್ಯದಲ್ಲಿ ರಕ್ಷಣಾ ವ್ಯವಸ್ಥೆ ಯಾವ ಮಟ್ಟಿಗಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಟೀಕಿಸಿದರು.   ಮನೆ ಮುಂದೆ ರಂಗೋಲಿ ಹಾಕುವುದೇ ಕಷ್ಟವಾಗಿದೆ. ಮೊದಲು ಪೊಲೀಸರಿಗೆ ಫೋನ್ ಮಾಡಿ ರಂಗೋಲಿ ಹಾಕುವಂತಹ ಪರಿಸ್ಥಿತಿ ಎದುರಾಗಿದೆ ಎಂದು ವ್ಯಂಗ್ಯವಾಡಿದರು. ಒಂದೇ ವಾರದಲ್ಲಿ ನಗರದ ವಿವಿಧೆಡೆ 13 ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಪೊಲೀಸರನ್ನೇ ಬಿಡದ ಕಿಡಿಗೇಡಿಗಳು ಇನ್ನು ಸಾಮಾನ್ಯಜನರನ್ನು ಬಿಡುತ್ತಾರಾ ಎಂದು ಪ್ರಶ್ನಿಸಿದರು.
ಇಡೀ ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಇದರ ಬಗ್ಗೆ ಅನೇಕ ಪೊಲೀಸರು ತಮ್ಮ ಬಳಿ ಸಂಕಟ ಹೇಳಿಕೊಂಡಿದ್ದಾರೆ. ಕೆಂಪಯ್ಯ ಅವರು ಸಲಹೆಗಾರರಾದ ಮೇಲೆ ಇಷ್ಟೆಲ್ಲ ಅವಾಂತರಗಳು ನಡೆದಿವೆ ಎಂದು ದೂರಿದರು.

25ರಂದು ರಾಜ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಷಾ ಆಗಮಿಸುತ್ತಿದ್ದಾರೆ. ಫೆ.4ರಂದು ಪ್ರದಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರು ಬರುವ ದಿನವೇ ಬಂದ್ ಮಾಡಲಾಗುತ್ತಿದೆ. ಇದನ್ನೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಾಡಿಸುತ್ತಿದ್ದಾರೆ. ಸಿಎಂ ರಾಜಕೀಯ ಪ್ರೇರಿತ ಕಾರ್ಯಗಳಿಗೆ ಕನ್ನಡಪರ ಸಂಘಟನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.  ಈಗಾಗಲೇ ಪರಿವರ್ತನಾ ಯಾತ್ರಾ ಕಾರ್ಯಕ್ರಮಗಳು ಫಿಕ್ಸ್ ಆಗಿವೆ. ಅದರಂತೆ ಕಾರ್ಯಕ್ರಮಗಳು ಸಹ ನಡೆಯುತ್ತಿವೆ. ಆದರೆ ಈಗ ನಮ್ಮ ರಾಷ್ಟ್ರೀಯ ನಾಯಕರು ಆಗಮಿಸುತ್ತಿರುವಾಗಲೇ ಬಂದ್ ಮಾಡುತ್ತಿರುವುದು ಸರಿಯಲ್ಲ. ಇದೇ ರೀತಿಯಾದರೆ ರಾಹುಲ್ ಗಾಂಧಿ ಬಂದಾಗ ನಾವು ಬಂದ್ ಮಾಡುತ್ತೇವೆ ಎಂದರು.

Facebook Comments

Sri Raghav

Admin