ಕರಾವಳಿಯನ್ನು ನಾನೆಂದು ಮರೆತಿಲ್ಲ : ಎಚ್.ಡಿ.ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

devegowda-3
ಮಂಗಳೂರು, ಜ.22- ಕರಾವಳಿ ಜಿಲ್ಲೆಗಳನ್ನು ನಾನು ಎಂದೂ ಮರೆತಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗಗಳಲ್ಲಿ ನಮ್ಮ ಸಂಘಟನೆ ಅಷ್ಟೊಂದು ಬಲವಾಗಿಲ್ಲ. ಆದರೂ ಸ್ಪರ್ಧಿಸುತ್ತೇವೆ. ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲುವು ಸಾಧಿಸಲು ಸಹಕರಿಸಿ ಎಂದರು. ಕೆಲವು ಸೀಟುಗಳನ್ನು ಕಮ್ಯುನಿಸ್ಟ್ ಪಕ್ಷಕ್ಕೆ ಬಿಟ್ಟು ಕೊಡಲು ಚಿಂತನೆ ನಡೆಸಲಾಗಿದೆ. ಎಲ್ಲ 224 ಕ್ಷೇತ್ರಗಳಲ್ಲೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದರು. ಅನುಮತಿ ಇಲ್ಲದೆ ಮಾಜಿ ಪ್ರಧಾನಿ ಬರುವುದು ಸರಿಯಲ್ಲ. ಹಾಗಾಗಿ ಮಂಗಳೂರಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

Facebook Comments