ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪರೂಪದ ಜೋಡಿ..!

ಈ ಸುದ್ದಿಯನ್ನು ಶೇರ್ ಮಾಡಿ

Chiikkamagaluru-01
ಚಿಕ್ಕಮಗಳೂರು, ಜ.23- ಶ್ರವಣ ಮತ್ತು ವಾಕ್ ದೋಷವುಳ್ಳ ತೇಜಸ್ ಮತ್ತು ಶ್ವೇತಾ ಸತಿ ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಗರದ ರತ್ನಗಿರಿ ರಸ್ತೆಯಲ್ಲಿರುವ ರೇಣುಕಾಚಾರ್ಯ ಕಲ್ಪನಾ ಮಂಟಪದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ವಿವಾಹ ನೆರವೇರಿತು. ಚಿಕ್ಕಮಗಳೂರು ತಾಲ್ಲೂಕಿನ ಲಕ್ಯ ಹೋಬಳಿಯ ಕುರುಬರಹಳ್ಳಿ ನಿವಾಸಿ ಕೆ.ಎ.ಕೃಷ್ಣೇಗೌಡ ಮತ್ತು ರುಕ್ಮಿಣಿ ದಂಪತಿ ಪುತ್ರ ತೇಜಸ್ ಹಾಗೂ ಕಡೂರು ತಾಲ್ಲೂಕಿನ ಕಂಸಾಗರದ ನಾಗರಾಜ್-ಮಂಜುಳಾ ಅವರ ಪುತ್ರಿ ಶ್ವೇತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ.

ತೇಜಸ್ ಅವರು ಡಿಪ್ಲೊಮಾ ಎಂಜಿನಿಯರಿಂಗ್ ಪೂರೈಸಿದ್ದು , ಮೈಸೂರಿನ ಇನ್‍ಸ್ಪೈರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಶ್ವೇತಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾರೆ. ತೇಜಸ್ ಚಿಕ್ಕಪ್ಪ ಜಯಣ್ಣ ಅವರು ಈ ಸಂಜೆಯೊಂದಿಗೆ ಮಾತನಾಡಿ, ಹುಟ್ಟಿನಿಂದಲೇ ತೇಜಸ್‍ಗೆ ಕಿವಿ ಕೇಳುತ್ತಿರಲಿಲ್ಲ. ಮಾತು ಬರುತ್ತಿರಲಿಲ್ಲ. ಈತ ಬುದ್ಧಿವಂತನಾಗಿದ್ದು, ಕಡೂರು -ಚಿಕ್ಕಮಗಳೂರಿನಲ್ಲಿ ವ್ಯಾಸಂಗ ಮುಗಿಸಿ ಮೈಸೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಶ್ರವಣ-ವಾಕ್ ದೋಷವಿರುವುದರಿಂದ ಈತ ಮದುವೆಗೆ ಒಪ್ಪಿರಲಿಲ್ಲ. ಆದರೆ ನೆಂಟಸ್ಥಿಕೆಯಲ್ಲಿನ ಶ್ವೇತಾ ಅವರನ್ನು ನೋಡಿ ಎರಡೂ ಕುಟುಂಬದವರು ಮದುವೆ ಮಾಡಿದ್ದೇವೆ. ಇದು ಪ್ರೇಮ ವಿವಾಹವಲ್ಲ. ಅವರ ಇಚ್ಛೆಯಂತೆ ವಿವಾಹ ಮಾಡಿದ್ದೇವೆಂದು ತಿಳಿಸಿದರು. ಬರವಣಿಗೆ ಮೂಲಕ ಮಾತನಾಡಿದ ತೇಜಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು , ಖುಷಿ ಕೊಟ್ಟಿದೆ. ನನ್ನನ್ನು ಅವಳು, ಅವಳನ್ನು ನಾನು ಅರ್ಥ ಮಾಡಿಕೊಂಡು ಆದರ್ಶ ದಂಪತಿಯಾಗಿ ಬದುಕುತ್ತೇವೆ ಎಂದು ಅವರು ಅಭಿಪ್ರಾಯ ಹಂಚಿಕೊಂಡರು.

Facebook Comments

Sri Raghav

Admin