ಯಾರ ಒತ್ತಡಕ್ಕೂ ಮಣಿದು ರೋಹಿಣಿ ಅವರನ್ನು ವರ್ಗಾವಣೆ ಮಾಡಿಲ್ಲ : ಸಿಎಂ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Rohini--02

ಬೆಂಗಳೂರು, ಜ.23-ಯಾರ ಒತ್ತಡಕ್ಕೂ ಮಣಿದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಲ್ಲ. ಮಹಿಳಾ ಅಧಿಕಾರಿಗೆ ಅನ್ಯಾಯವನ್ನೂ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದರು. ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ 121ನೆ ಹುಟ್ಟುಹಬ್ಬದ ಅಂಗವಾಗಿ ವಿಧಾನಸೌಧದ ಬಳಿಯ ಸುಭಾಷ್‍ಚಂದ್ರ ಬೋಸ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಕೋಲಾರ ಮತ್ತಿತರ ಕಡೆ ಮಹಿಳೆಯರೇ ಜಿಲ್ಲಾಧಿಕಾರಿಯಾಗಿದ್ದಾರೆ. ಒತ್ತಡದಿಂದ ಅವರ ವರ್ಗಾವಣೆ ಮಾಡಿಲ್ಲ. ಅದೊಂದು ಆಡಳಿತಾತ್ಮಕ ವಿಚಾರ. ಇಲ್ಲಿ ಅನ್ಯಾಯವೂ ನಡೆದಿಲ್ಲ ಎಂದು ಹೇಳಿದರು.  ರೋಹಿಣಿ ಸಿಂಧೂರಿ ಅವರ ಪರವಾಗಿ ಹಾಸನದಲ್ಲಿ ಎಲ್ಲಿಯೂ ಹೋರಾಟ ನಡೆಯುತ್ತಿಲ್ಲ. ಯಾರು ಏಕೆ ಹೋರಾಟ ನಡೆಸುತ್ತಾರೆ. ಇದೊಂದು ಆಡಳಿತಾತ್ಮಕ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.  ಮಹಿಳಾ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದೇ? ಎಂದು ಪ್ರಶ್ನಿಸಿದರು. ಕನ್ನಡ ಪರ ಸಂಘಟನೆಗಳು ನಾವು ಹೇಳಿದಂತೆ ಕೇಳುವುದಿಲ್ಲ. ಯಾವುದು ಅವರಿಗೆ ಸರಿ ಎನಿಸುತ್ತದೆಯೇ ಅದನ್ನೇ ಮಾಡುತ್ತಾರೆ. ಬಿಜೆಪಿಯ ನಾಯಕರಿಗೆ ಬುದ್ಧಿ ಇಲ್ಲ. ಹಾಗಾಗಿಯೇ ಈಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಸುಭಾಷ್‍ಚಂದ್ರ ಬೋಸ್ ದೇಶ ಕಂಡ ಅಪ್ರತಿಮ ವ್ಯಕ್ತಿ. ಆ ಕಾಲದಲ್ಲಿ ಐಸಿಎಸ್ ಪಾಸ್ ಮಾಡಿದ ಬೋಸ್‍ರವರು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಕಠಿಣ ನಿಲುವು ಹೊಂದಿದ್ದರು ಎಂದರು.  ಆಜಾದ್ ಹಿಂದ್ ಸೇನೆ ಪ್ರಾರಂಭಿಸಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದರು. ಆದರೆ ಆಕಸ್ಮಿಕ ವಿಮಾನ ದುರಂತದಲ್ಲಿ ವೀರಮರಣವನ್ನಪ್ಪಿದರು ಎಂದು ಸ್ಮರಿಸಿದರು.ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ಸುಭಾಷ್‍ಚಂದ್ರ ಬೋಸ್ ಯುವಕರಿಗೆ ಸ್ಫೂರ್ತಿಯಾದ ವ್ಯಕ್ತಿ. ಇವರ ದೇಶಪ್ರೇಮ ಎಲ್ಲರಿಗೂ ಆದರ್ಶವಾಗಿದೆ ಎಂದು ತಿಳಿಸಿದರು. ಸರ್ಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin