ಆಸ್ಪತ್ರೆಗೆ ಬಂದ ಮಹಿಳೆಯೊಂದಿಗೆ ಅಸಭ್ಯ ವಾಗಿ ವರ್ತಿಸಿದ ಡಾಕ್ಟರ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

doctor

ಬೆಂಗಳೂರು, ಜ.24-ಕ್ಲಿನಿಕ್‍ಗೆ ಬಂದಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವೈದ್ಯನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿಯಲ್ಲಿ 30 ವರ್ಷದಿಂದ ಕ್ಲಿನಿಕ್ ನಡೆಸುತ್ತಿರುವ 64 ವರ್ಷದ ವೈದ್ಯ ಪೊಲೀಸರ ಅತಿಥಿಯಾಗಿದ್ದಾನೆ. ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದ 23 ವರ್ಷದ ವಿವಾಹಿತ ಮಹಿಳೆಯೊಬ್ಬರು ಈ ವೈದ್ಯರ ಕ್ಲಿನಿಕ್‍ಗೆ ಚಿಕಿತ್ಸೆಗೆಂದು ಬಂದಿದ್ದಾರೆ. ಈ ವೇಳೆ ಪರೀಕ್ಷಿಸುವ ನೆಪದಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ವೈದ್ಯ ವರ್ತಿಸಿದಾಗ ಸಹಾಯಕ್ಕಾಗಿ ಚೀರಿಕೊಂಡಿದ್ದಾರೆ.

ತಕ್ಷಣ ಅಕ್ಕಪಕ್ಕದವರು ಕ್ಲಿನಿಕ್ ಬಳಿ ನೆರವಿಗೆ ಧಾವಿಸಿದ್ದಾರೆ. ವೈದ್ಯ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಗಿ ಗಂಡ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಬ್ಯಾಡರಹಳ್ಳಿ ಠಾಣೆ ಪೊಲೀಸರು ಈ ಸಂಬಂಧ ವೈದ್ಯನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Facebook Comments

Sri Raghav

Admin