ರಸ್ತೆಯಲ್ಲಿ ಅಡ್ಡಬಂದ ಮಾನಸಿಕ ಅಸ್ವಸ್ಥೆಯನ್ನು ಕಾಪಾಡಲು ಹೋಗಿ ಮರಕ್ಕೆ ಕಾರ್ ಡಿಕ್ಕಿ, ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--1

ಹಾಸನ, ಜ.24- ಭೀಕರ ರಸ್ತೆ ಅಪಘಾತದಲ್ಲಿ ಮಧುಮಗಳು ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದು, ಮಧುಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಲೂರು ತಾಲ್ಲೂಕಿನ ಪಾಳ್ಯಾ ಗ್ರಾಮದಲ್ಲಿ ಸಂಭವಿಸಿದೆ. ಗುಬ್ಬಿ ಮೂಲದ ಮಧುಮಗಳು ರಾಧಿಕ(25), ತಾಯಿ ರತ್ನಮ್ಮ(40) ಮತ್ತು ಮಧುಮಗನ ತಾಯಿ ಮೃತಪಟ್ಟ ದುರ್ದೈವಿಗಳು.

ಪ್ರೀವೆಡ್ಡಿಂಗ್ ಫೋಟೋ ಶೂಟ್ ಮುಗಿಸಿಕೊಂಡು ಹಿಂದಿರುಗುವಾಗ ಮಾನಸಿಕ ಅಸ್ವಸ್ಥೆ ಕಾರಿಗೆ ಅಡ್ಡಬಂದಿದ್ದನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಫೆ.4ರಂದು ತುಮಕೂರಿನಲ್ಲಿ ಅದ್ಧೂರಿ ಮದುವೆ ಸಮಾರಂಭ ನಡೆಯಬೇಕಿತ್ತು. ಈ ಹಿನ್ನೆಲೆಯಲ್ಲಿ ಫೋಟೋ ಶೂಟ್‍ಗಾಗಿ ತೆರಳಿದ್ದರು ಎನ್ನಲಾಗಿದೆ. ಈ ಸಂಬಂಧ ಆಲೂರು ಫೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin