ರವಿಪೂಜಾರಿಯಿಂದ ಬೆದರಿಕೆ ಕರೆ : ರಕ್ಷಣೆಗಾಗಿ ಗೃಹ ಸಚಿವರ ಮೊರೆಹೋದ ಶಾಸಕ ಸುರೇಶ್‍ಬಾಬುಗೆ

ಈ ಸುದ್ದಿಯನ್ನು ಶೇರ್ ಮಾಡಿ

Suresh-Babu--01

ಬೆಂಗಳೂರು,ಜ.25-ಭೂಗತ ಪಾತಕಿ ರವಿಪೂಜಾರಿ ಅವರಿಂದ ಜೀವ ಬೆದರಿಕೆ ಕರೆ ಬಂದಿದ್ದು, ತಮಗೆ ರಕ್ಷಣೆ ನೀಡಬೇಕು ಹಾಗೂ ಈ ಬಗ್ಗೆ ತನಿಖೆ ನಡೆಸಬೇಕೆಂದು ಜೆಡಿಎಸ್ ಶಾಸಕ ಸಿ.ಬಿ.ಸುರೇಶ್‍ಬಾಬು ಅವರು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಮನವಿ ಮಾಡಿದರು. ವಿಧಾನಸೌಧದಲ್ಲಿಂದು ಗೃಹಸಚಿವರನ್ನು ಭೇಟಿ ಮಾಡಿದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್‍ಬಾಬು ಮನವಿ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 27ರಂದು ನಾನು ರವಿಪೂಜಾರಿ ಎಂಬ ಹೆಸರಿನಲ್ಲಿ ಬೆದರಿಕೆ ಕರೆ ಬಂತು. 10 ಕೋಟಿ ಹಣ ನೀಡುವಂತೆ ಬೆದರಿಕೆ ಹಾಕಿದ್ದು, ಎರಡು ಮೆಸೇಜ್‍ಗಳೂ ಬಂದಿವೆ ಎಂದು ತಿಳಿಸಿದರು. ವಿದೇಶಿ ಸಂಖ್ಯೆ ಕರೆಗಳಿಂದ ಮೆಸೇಜ್ ಬಂದಿದ್ದು , ಕರೆ ಖಾಸಗಿ ಫೋನ್‍ನಿಂದ ಬಂದಿವೆ. ಕರೆ ಎಲ್ಲಿಂದ ಬಂದಿದೆ ಎಂಬುದು ಗೊತ್ತಾಗಿಲ್ಲ. ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ. ಈ ಸಂಬಂಧ ಬಸವೇಶ್ವರನಗರ ಠಾಣೆಗೆ ದೂರು ನೀಡಲಾಗಿದ್ದು , ಎಫ್‍ಐಆರ್ ದಾಖಲಾಗಿದೆ ಎಂದು ಹೇಳಿದರು. ನಾವು ಸದಾ ಜನರೊಂದಿಗೆ ಬೆರೆಯುವವರು, ನಮಗೆ ಜೀವ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು ಹಾಗೂ ಸೂಕ್ತ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದರು.

Facebook Comments

Sri Raghav

Admin