ಬಂದ್ ನಿಂದ ಭಣಗುಡುತ್ತಿದ್ದ ಶಕ್ತಿಸೌಧ

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01
ಬೆಂಗಳೂರು, ಜ.25- ಮಹದಾಯಿ ನದಿ ನೀರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿದ್ದ ಬಂದ್‍ನಿಂದಾಗಿ ಶಕ್ತಿ ಸೌಧಗಳು ಭಣಗುಡುತ್ತಿದ್ದವು. ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ಹಾಜರಾತಿ ಬಹಳ ಕಡಿಮೆ ಇತ್ತು. ಬಿಎಂಟಿಸಿ ಬಸ್ ಇರದ ಕಾರಣ ಕೆಲವರು ಖಾಸಗಿ ವಾಹನ ಮತ್ತು ಮೆಟ್ರೋ ಟ್ರೈನ್‍ನಲ್ಲಿ ಬಂದಿದ್ದರು. ಸರ್ಕಾರದ ಬಹುತೇಕ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿತ್ತು. ಸಾರ್ವಜನಿಕರು ಯಾರೂ ಆಗಮಿಸದ ಕಾರಣ ಎರಡೂ ಸೌಧಗಳು ಬಿಕೋ ಎನ್ನುತ್ತಿದ್ದವು.

Facebook Comments

Sri Raghav

Admin