ಮಹದಾಯಿ ನೀರು ಕೇಳುವುದು ಕನ್ನಡಿಗರ ಹಕ್ಕು : ಪ್ರಕಾಶ್‍ರೈ

ಈ ಸುದ್ದಿಯನ್ನು ಶೇರ್ ಮಾಡಿ

Prakash-Rai--01

ಬೆಂಗಳೂರು, ಜ.25- ಮಹದಾಯಿ ನದಿ ನೀರು ಕೇಳುವುದು ಕನ್ನಡಿಗರ ಹಕ್ಕು. ಈ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಬಹುಬಾಷಾ ನಟ ಪ್ರಕಾಶ್‍ರೈ ಹೇಳಿದರು. ಬಂದ್ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು ಮಹದಾಯಿ ನೀರಿನ ಮೇಲೆ ಕನ್ನಡಿಗರ ಹಕ್ಕಿದೆ. ನಮ್ಮ ನೀರನ್ನು ನಾವು ಬಳಸಿಕೊಳ್ಳಬೇಕು. ಎಲ್ಲರೂ ಒಂದೇ ವೇದಿಕೆಯಲ್ಲಿ ನಿಂತು ಹೋರಾಟ ಮಾಡೋಣ ಎಂದು ತಿಳಿಸಿದರು.  ಬಂದ್‍ಗೆ ನನ್ನ ಪೂರ್ಣ ಬೆಂಬಲವಿದೆ ಎಂದಿರುವ ಅವರು, ಮೂಲಭೂತ ವಿಚಾರದಲ್ಲಿ ಯಾರೂ ಪಕ್ಷ ರಾಜಕೀಯ ಮಾಡಬಾರದು. ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ ಎಂದರು.ಒಮ್ಮೆ ಆಯ್ಕೆಯಾದ ಮೇಲೆ ಅದು ಚುನಾಯಿತ ಸರ್ಕಾರ. ಆಯ್ಕೆಯಾದ ಮೇಲೆ ಅದು ಪಕ್ಷವಾಗಿ ಉಳಿಯುವುದಿಲ್ಲ. ಜನರಿಗಾಗಿ ಶ್ರಮಿಸಬೇಕು ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

Facebook Comments

Sri Raghav

Admin