ಸಿ.ವೀರೇಶ್‍ಗೆ ಅರಗಿಣಿ ಪ್ರಶಸ್ತಿ, ರಾಜೇಶ್ ರೈಚಟ್ಲಗೆ ಅಭಿಮಾನಿ ಪ್ರಶಸ್ತಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

Aragini--1

ಬೆಂಗಳೂರು, ಜ.25- ಕರ್ನಾಟಕ ಮಾಧ್ಯಮ ಅಕಾಡೆಮಿ ಏರ್ಪಡಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಳ ಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ ನೀಡುವ ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ಭಾಜನರಾದ ಡಾ.ಬರಗೂರು ರಾಮಚಂದ್ರಪ್ಪ, ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿಗೆ ಪುರಸ್ಕøತರಾದ ಕೆ.ಎಂ.ವೀರೇಶ್, ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿಗೆ ಭಾಜನರಾದ ಪ್ರಜಾವಾಣಿ ಮುಖ್ಯವರದಿಗಾರ ರಾಜೇಶ್ ರೈಚಟ್ಲ ಮುಂತಾದವರಿಗೆ ನಿನ್ನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಅತ್ಯುತ್ತಮ ಜಿಲ್ಲಾ ಪತ್ರಿಕೆ ನೀಡುವ ಆಂದೋಲನ ಪ್ರಶಸ್ತಿಯು ದಾವಣಗೆರೆಯ ನಗರವಾಣಿಗೆ ದೊರೆತರೆ, ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ , ಪತ್ರಕರ್ತ ಕಲಾವಿದ ವಿಷ್ಣು ಅವರಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜ ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ವಾರ್ಷಿಕ ಪ್ರಶಸ್ತಿಗೆ ಪುರಸ್ಕøತರಾದ ಶಿವಲಿಂಗಪ್ಪ ದೊಡ್ಡಮನಿ, ಸೌಮ್ಯಅಜಿ, ವಿಜಯ್‍ಕುಮಾರ್ ಪಾಟೀಲ್, ಕೆ.ಆದಿನಾರಾಯಣಮೂರ್ತಿ, ಜೆ.ಶಿವಣ್ಣ, ವೈ.ಎಸ್.ಎಲ್.ಸ್ವಾಮಿ, ಎಂ.ಸಿ.ಶೋಭಾ, ಬಿ.ಎನ್.ಶ್ರೀಧರ್, ಡಾ.ಶಿವರುದ್ರಪ್ಪ, ಅಲೀಂ ಸೇರಿದಂತೆ 40 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿ, ಗೂಂಡಾವರ್ತನೆಯಿಂದ ಪ್ರಸ್ತುತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ಉಂಟಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು.

abhimaani

ತಲೆ ತೆಗೆಯುತ್ತೇವೆ, ಕೊಲೆ ಮಾಡಿದವರಿಗೆ ಬಹುಮಾನ ನೀಡುತ್ತೇವೆ, ಮೂಗು ಕೊಯ್ದವರಿಗೆ ಇಷ್ಟು, ತಲೆ ತೆಗೆದವರಿಗೆ ಇಷ್ಟು ಎಂಬ ಘಂಟಾಘೋಷವಾಗಿ ಹೇಳುವ ಪರಿಸ್ಥಿತಿ ಇಂದಿನ ಸಮಾಜದಲ್ಲಿ ನಿರ್ಮಾಣವಾಗುತ್ತಿರುವುದು ದುರದೃಷ್ಟಕರ. ಪದ್ಮಾವತ್ ಸಿನಿಮಾ ಬಿಡುಗಡೆಗೆ ವ್ಯಕ್ತವಾಗುವ ವಿರೋಧ ಹಾಗೂ ಪ್ರತಿಭಟನೆಗಳು ಪ್ರಜಾತಾಂತ್ರಿಕವಾಗಿ ನಡೆಯುವ ಬದಲು ಹಲ್ಲೆಯ ಸ್ವರೂಪ ಪಡೆಯುತ್ತಿರುವುದು ಆತಂಕದ ವಿಷಯ ಎಂದರು. ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಟಿಆರ್‍ಪಿಗಾಗಿ ಕಿತ್ತಾಡುವುದು ಸರಿಯಲ್ಲ. ಮಾಧ್ಯಮಗಳು ರಾಜಕೀಯದ ಮುಖವಾಣಿಗಳಾಗಬಾರದು ಎಂದರು. ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ವಿ.ಆರ್ ಠಾಗೂರ್, ಆಂದೋಲನ ಪತ್ರಿಕೆ ಸಂಪಾದಕ ರವಿಕೋಟಿ, ಅಕಾಡೆಮಿ ಕಾರ್ಯದರ್ಶಿ ಶಂಕರಪ್ಪ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Facebook Comments

Sri Raghav

Admin