ಕೇಸರಿ ಪೊರೆ ಕಣ್ಣಿನಿಂದ ನೋಡುವುದನ್ನು ಬಿಡಿ : ಡಾ.ಎಚ್.ಸಿ.ಮಹದೇವಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

mysuru

ಮೈಸೂರು, ಜ.26- ಕೇಸರಿ ಪೊರೆ ಕಣ್ಣಿನಿಂದ ನೋಡುವುದನ್ನು ಬಿಟ್ಟು ತಿಳಿಯಾದ ಕಣ್ಣಿನಿಂದ ನೋಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.ನಗರದ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯತು ಮೈದಾನದಲ್ಲಿಂದು 69ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಸಾಮಾಜಿಕ, ರಾಜಕೀಯ, ಆರ್ಥಿಕ ಸಮಾನತೆಯ ಸಮೀಕರಣವಾದಾಗ ಮಾತ್ರ ಭಾರತವು ಉದ್ದಾರವಾಗುತ್ತದೆ ಎಂದು ಹೇಳಿದರು.ತಮ್ಮ ಮೈ-ಮನಸ್ಸಿನಲ್ಲಿ ಮಲಿನತೆಯನ್ನು ತುಂಬಿಕೊಂಡಿರುವುದರಿಂದ ಆ ಮಲಿನತೆಯನ್ನು ಸ್ವಾತಂತ್ರ್ಯ , ಸಮಾನತೆ ಮತ್ತು ಭಾತೃತ್ವ ತತ್ವಗಳ ನೆಲೆಯಲ್ಲಿನ ಮುಕ್ತ ಮನಸ್ಸಿನಿಂದ ನೋಡಬೇಕೆಂದು ಅವರು ತಿಳಿಸಿದರು.

mysuru-2

ಈ ನಿಟ್ಟಿನಲ್ಲಿ ನಾವು ನಡೆದಾಗ ಭಾರತವನ್ನು ಒಂದು ಸಮೃದ್ಧ ಮತ್ತು ಬಿಲಿಷ್ಠ ರಾಷ್ಟ್ರವನ್ನಾಗಿ ಕಟ್ಟಬಹುದಾಗಿದೆ. ಹೀಗಾದಾಗ ವಿಶ್ವದ ಬಲಿಷ್ಠ ರಾಷ್ಟ್ರಗಳು ಒಡ್ಡುವ ಸವಾಲುಗಳಿಗೆ ಪ್ರತಿ ಸವಾಲನ್ನು ಒಡ್ಡಬಹುದು ಎಂದು ಹೇಳಿದರು. ಭಾರತವು ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ ಭಾರತವನ್ನು ಅವಲೋಕಿಸಿದಾಗ ದಲಿತರು ಬುಡಕಟ್ಟು ವರ್ಗಗಳು, ಹಿಂದುಳಿದ ವರ್ಗಗಗಳು, ಮಹಿಳೆಯರು, ಅಲ್ಪಸಂಖ್ಯಾತರು, ಮಕ್ಕಳು, ಅಬಲೆವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಅಸಮಾನತೆಯನ್ನು ಕೊನೆಗೊಳಿಸಲು ಸಾಧ್ಯವೆ ಆಗಿಲ್ಲ. ಇದು ವಿಫಲತೆಯನ್ನು ಕಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಂವಿಧಾನ ಅರ್ಪಿತವಾದ ದಿನದಂದು ಅಂಬೇಡ್ಕರ್ ಅವರು ಮಾಡಿದ ಭಾಷಣ ಪ್ರತಿಯೊಬ್ಬ ಭಾರತೀಯನಿಗೂ ಎಚ್ಚರಿಕೆಯ ಮಾತುಗಳಾಗಿವೆ ಎಂದು ತಿಳಿಸಿದರು.

ನೂತನ ಮೇಯರ್ ಭಾಗ್ಯವತಿ, ಉಪಮೇಯರ್ ಇಂದಿರಾ, ಜಿಲಾಧಿಕಾರಿ ರಮ್‍ದೀಪ್, ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಪಂ ಅಧ್ಯಕ್ಷೆ ನಯೀಮ ಸುಲ್ತಾನ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕತಿಕ ಕಾರ್ಯಕ್ರಮಗಳ ಜನರ ಮನ ಸೂರೆಗೊಂಡವು. ಇದೇ ವೇಳೆ ಬಾಂಬ್‍ಸ್ಫೋಟ ಸಂದರ್ಭದಲ್ಲಿ ಹೇಗೆ ವಿಐಪಿಗಳನ್ನು ರಕ್ಷಿಸಿಕೊಳ್ಳಬಹುದು ಎಂಬುದರ ಬಗ್ಗೆ ಅಣಕು ಪ್ರದರ್ಶನ ಮಾಡಲಾಯಿತು.

Facebook Comments

Sri Raghav

Admin