ಟ್ವೀಟರ್ ನಲ್ಲಿ ಸಿದ್ದರಾಮಯ್ಯನವರಿಗೆ ಡಿವಿಎಸ್ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Sadanandagowda--01

ಬೆಂಗಳೂರು,ಜ.26-ಜೈಲಿಗೆ ಹೋಗಿ ಬಂದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದಾರೆ. ನಿಮ್ಮ ಪಕ್ಷ ಕೂಡ ಜೈಲು ಹಕ್ಕಿಗಳಿಂದಲೇ ಸ್ಥಾಪನೆಯಾಗಿದ್ದು , ನಿಮ್ಮ ಕಾಂಗ್ರೆಸ್ ಪಕ್ಷ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿತ್ತು. ಇದರ ಪರಿಣಾಮ ಅಂದಿನ ಪ್ರಧಾನಿ ಇಂದಿರಾಗಾಂಧಿ ಜೈಲಿಗೆ ಹೋಗಿದ್ದು ನೆನಪಿದೆಯೇ ಎಂದು ಪ್ರಶ್ನಿಸಿದ್ದಾರೆ.

ಜೈಲು ಹಕ್ಕಿಯಾಗಿದ್ದ ಇಂದಿರಾಗಾಂಧಿಯವರ ಮಗ ರಾಜೀವ್ ಗಾಂಧಿ ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಒಂದು ವೇಳೆ ಅವರು ಬದುಕಿದ್ದರೆ ಜೀವನ ಪರ್ಯಂತ ಜೈಲಿನಲ್ಲಿ ಇರಬೇಕಿತ್ತು. ಹಾಲಿ ಎಐಸಿಸಿ ಅಧ್ಯಕ್ಷರು ನಿಮ್ಮ ಹೈಕಮಾಂಡ್ ಎನಿಸಿರುವವರ ಮೇಲೆ ಎಷ್ಟು ಭ್ರಷ್ಟಾಚಾರದ ಪ್ರಕರಣ ಇದೆ ಎಂಬುದು ಸಿದ್ದರಾಮಯ್ಯನವರೇ ನಿಮಗೆ ಗೊತ್ತೆ? ಎಂದು ಟಾಂಗ್ ಕೊಟ್ಟಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ಲೋಕಾಯುಕ್ತವನ್ನು ಮುಚ್ಚಿಸಿ ಎಸಿಬಿಯನ್ನು ರಚಿಸಿರುವ ನಿಮಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಎಸಿಬಿಯಲ್ಲಿ ಮೊದಲು ಎಷ್ಟು ಪ್ರಕರಣಗಳು ನಿಮ್ಮ ವಿರುದ್ಧ ದಾಖಲಾಗಿವೆ ಎಂಬುದನ್ನು ನೋಡಿಕೊಳ್ಳಿ.
ಬಿಜೆಪಿಯ ಬಗ್ಗೆ ಮಾತನಾಡುವ ಮೊದಲು ನಿಮ್ಮ ನೈತಿಕತೆಯನ್ನು ಪ್ರಶ್ನಿಸಿಕೊಳ್ಳಿ ಎಂದು ಟ್ವಿಟರ್‍ನಲ್ಲಿ ಸದಾನಂದಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಜಾಡಿಸಿದ್ದಾರೆ.

Facebook Comments

Sri Raghav

Admin