ನಮ್ಮ ಆಶಯಗಳು ಫಲ ನೀಡಿವೆಯೇ ಎಂದು ಯೋಚಿಸಬೇಕಿದೆ : ಸಚಿವ ರೋಷನ್ ಬೇಗ್

ಈ ಸುದ್ದಿಯನ್ನು ಶೇರ್ ಮಾಡಿ

chikka

ಚಿಕ್ಕಮಗಳೂರು,ಜ.26- ಗಣರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಆಶಯಗಳು ಫಲ ನೀಡಿವೆಯೇ ಎಂದು ನಾವೆಲ್ಲರೂ ಒಟ್ಟಾಗಿ ಯೋಚಿಸಬೇಕಿದೆ ಎಂದು ಜಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್ ಬೇಗ್ ತಿಳಿಸಿದರು. ಚಿಕ್ಕಮಗಳೂರಿನ ಸುಭಾಷ್ ಚಂದ್ರಬೋಸ್ ಕ್ರೀಡಾಂಣದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ನಾವು ಒಗಟ್ಟಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೂ ಸಹ ರಾಜ್ಯ-ರಾಜ್ಯಗಳ ನಡುವೆ ಕಲಹಗಳು ಹಾಗೆಯೇ ಉಳಿದಿವೆ. ಗಡಿ ವಿವಾದ, ಜಲ ವಿವಾದ, ಅಭಿವೃದ್ದಿ ಅಸಮಾನತೆ ಇರಬಹುದು. ಎಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಭಾರತಕ್ಕಿದೆ ಎಂದರು.  ದೇಶದಲ್ಲಿರುವ ಸರ್ವಧರ್ಮಗಳನ್ನು ಗೌರವಿಸಿ ಯಾವುದೇ ಕೋಮುಗಲಭೆಗಳಿಗೆ ಅವಕಾಶ ನೀಡದೆ ಸರ್ವಧರ್ಮ ಸಮನ್ವಯ ಬೆಳೆಸಿಕೊಂಡು ಹೋಗಲು ನಾವೆಲ್ಲರೂ ಪ್ರಮಾಣ ಮಾಡಬೇಕಿದೆ ಎಂದು ಹೇಳಿದರು. ಜಾತಿ, ಪಂಗಡ, ಭಾಷೆ ಇತ್ಯಾದಿ ಸಂಕುಚಿತ ಭಾವನೆಗಳಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆ ವಾತಾವರಣ ನಿರ್ಮಿಸಿ ದೇಶದ ಐಕ್ಯತೆಗೆ ಒಗ್ಗಟ್ಟು ಕಾಪಾಡಿಕೊಳ್ಳಲು ಎಲ್ಲರೂ ಶ್ರಮಿಸೋಣ ಎಂದರು.

ಜನಪರ ಸರ್ಕಾರ ರಾಜ್ಯದ ಕೋಟಿ ಹೆಚ್ಚು ಜನರಿಗೆ ಸರ್ಕಾರ ಒಂದಲ್ಲ ಒಂದು ರೀತಿ ಸಹಾಯವಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಎಂಟು ಕ್ಯಾಂಟೀನ್‍ಗಳನ್ನು ನೀಡಲಾಗಿದೆ. ಗ್ರಾಮೀಣ ಭಾಗಗಳಿದ್ದ ಯಶಸ್ವಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಲಾಗಿದೆ ಎಂದರು. ಬಸವೇಶ್ವರರಿಗೆ ಗೌರವ ಸಲ್ಲಿಸಲು ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಹಾಕಲು ಸೂಚಿಸಲಾಗಿದೆ ಎಂದ ಅವರು, ನಮ್ಮ ಸರ್ಕಾರ ಘೋಷಣೆ ಮಾಡಿದ ಯೋಜನೆಗಳು ಫಲ ನೀಡಿವೆ ಜನರ ಆಶಯದಂತೆ ಸ್ವಚ್ಚ , ಪಾರದರ್ಶಕ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಟಿ.ರವಿ ವಹಿಸಿದ್ದು, ಜಿಪಂ ಅಧ್ಯಕ್ಷೆ ಚೈತ್ರಶ್ರೀ, ತಾಪಂ ಅಧ್ಯಕ್ಷ ಮಹೇಶ್, ನಗರಸಭೆ ಅಧ್ಯಕ್ಷೆ ಶಿಲ್ಪ ರಾಜಶೇಖರ್, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಮುಂತಾದವರು ವೇದಿಕೆಯಲ್ಲಿದ್ದರು.

Facebook Comments

Sri Raghav

Admin