ವಾಯುಪಡೆ ಯೋಧ ಜ್ಯೋತಿ ಪ್ರಕಾಶ್ ನಿರಾಲಾಗೆ ಮರಣೋತ್ತರ ಅಶೋಕ ಚಕ್ರ

ಈ ಸುದ್ದಿಯನ್ನು ಶೇರ್ ಮಾಡಿ

Ashok-Chakra--01

ನವದೆಹಲಿ, ಜ.26-ಭಾರತೀಯ ವಾಯುಪಡೆಯ ಗರುಡ ಕಮಾಂಡೊನ ಯೋಧ ಜ್ಯೋತಿ ಪ್ರಕಾಶ್ ನಿರಾಲಾ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರ ನೀಡಲಾಗಿದೆ. 69ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೇನಾ ಸಿಬ್ಬಂದಿ ಮತ್ತು ಇತರರಿಗೆ ನೀಡುವ ಶೌರ್ಯ ಪ್ರಶಸ್ತಿಗಳು ಮತ್ತು ಒಂದು ಅಶೋಕ ಚಕ್ರ, ಒಂದು ಕೀರ್ತಿ ಚಕ್ರ ಹಾಗೂ 14 ಶೌರ್ಯ ಚಕ್ರ ಪ್ರಶಸ್ತಗಳನ್ನು ಪ್ರದಾನ ಮಾಡಿದರು.

ಭಾರತೀಯ ವಾಯು ಪಡೆಯ ಗರುಡ ಕಮಾಂಡೊನ ಇತರ ಮೂವರಿಗೂ ಶೌರ್ಯ ಚಕ್ರ ಪ್ರಶಸ್ತಿ ಘೋಷಿಸಲಾಗಿದೆ. ಇವರಲ್ಲಿ ಇಬ್ಬರು ಹುತಾತ್ಮರಾಗಿದ್ದಾರೆ. ಜ್ಯೋತಿ ಪ್ರಕಾಶ್ ನಿರಾಲಾ ಅವರು ರಾಷ್ಟ್ರೀಯ ರೈಫಲ್ ಬೆಟಲಿಯನ್‍ಗೆ ಆಯ್ಕೆಗೊಂಡಿದ್ದ ಆಪರೇಷನ ರಕ್ಷಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದ ಬಂಡಿಪೆರಾ ಜಿಲ್ಲೆಯ ಕಳೆದ ವರ್ಷ ನವೆಂಬರ್ 18ರಂದು ಆರು ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗರುಡ ಕಮಾಂಡೊನ ನಿರಾಲಾ ಮತ್ತು ದೇವೇಂದ್ರ ಮೆಹ್ತಾ ಭಾಗವಹಿಸಿದ್ದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ನಿರಾಲಾ ಅವರು ಉಗ್ರರಾದ ಉಬೈದ್ ಅಲಿಯಾಸ್ ಒಸಾಮಾ ಜುಂಗಿ ಮತ್ತು ಮಹಮದ್ ಬಾಯ್‍ನನ್ನು ಹತ್ಯೆಗೈದಿದ್ದರು. ಜತೆಗೆ ಇಬ್ಬರನ್ನು ಗಾಯಗೊಳಿಸಿದ್ದರು. ಇನ್ನೊಬ್ಬ ಉಗ್ರನನ್ನು ಮೆಹ್ತಾ ಹತ್ಯೆಗೈದಿದ್ದರು. ಆದರೆ, ಗುಂಡಿನ ಚಕಮಕಿಯಲ್ಲಿ ನಿರಾಲಾ ಹುತಾತ್ಮರಾಗಿದ್ದರು. ಈ ಕಾರ್ಯಾಚರಣೆಯಲ್ಲಿ ಎಲ್ಲ ಉಗ್ರರನ್ನು ಹತ್ಯೆಗೈಯಲಾಗಿತ್ತು.
ಕೀರ್ತಿ ಚಕ್ರ ಶೌರ್ಯ ಪ್ರಶಸ್ತಿಯನ್ನು ಭಾರತೀಯ ಸೇನೆಯ ಮೇಜರ್ ವಿಜಯಂತ್ ಬಿಸ್ತ್ ಅವರಿಗೆ ನೀಡಲಾಗಿದೆ. ಮುಂಬೈನಲ್ಲಿ ನಾಲ್ಕು ಸಿಬ್ಬಂದಿ ಜೀವ ಉಳಿಸಿದ್ದರಿಂದ ನೌಕಾ ಪಡೆಯ ಸಿಬಾ ಥೆಕ್ಕೊ ಅವರಿಗೆ ನೌಕಾ ಸೇನಾ ಪದಕ ದೊರೆತಿದೆ.

Facebook Comments

Sri Raghav

Admin