ವೇದಿಕೆ ಹಂಚಿಕೊಳ್ಳದಿದ್ದರೆ ಯಾವುದೇ ಸಮಾರಂಭ ನಿಲ್ಲಲ್ಲ : ಗೌಡರಿಗೆ ಸಚಿವ ಮಂಜು ಟಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

Devegowda--02

ಹಾಸನ, ಜ.26- ಮಾಜಿ ಪ್ರಧಾನಿ ದೇವೇಗೌಡರು ವೇದಿಕೆ ಹಂಚಿಕೊಳ್ಳದಿದ್ದರೆ ಯಾವುದೇ ಸಮಾರಂಭ ನಿಂತುಹೋಗುವುದಿಲ್ಲ. ಮಹಾಮಸ್ತಕಾಭಿಷೇಕ ಮತ್ತಿತರ ಕಾರ್ಯಕ್ರಮಗಳು ಸುಗಮವಾಗಿ ನೆರವೇರುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ದೇವೇಗೌಡರಿಗೆ ಟಾಂಗ್ ನೀಡಿದರು. ಜಿಲ್ಲಾ ಕ್ರೀಡಾಂಗಣದಲ್ಲಿಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1983ರಲ್ಲಿ ದೇವೇಗೌಡರು ಶಾಸಕರಾಗಲು ನಾನು ಸಹಾಯ ಮಾಡಿದ್ದೇನೆ. ಆಗ ನಾನು ಜೆಡಿಎಸ್‍ನಲ್ಲಿದ್ದೆ. ಅದನ್ನು ಗೌಡರು ಮರೆಯಬಾರದು ಎಂದರು.
2006ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸರ್ಕಾರದಿಂದ 116 ಕೋಟಿ ರೂ. ಬಿಡುಗಡೆಯಾಗಿತ್ತು. ಈ ಸಂಬಂಧ ಖರ್ಚು-ವೆಚ್ಚದ ಬಗ್ಗೆ ಯಾವುದೇ ಇಲಾಖೆಗಳಲ್ಲಿ ದಾಖಲೆಗಳೇ ಇಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನೂ ನೀಡಿಲ್ಲ ಎಂದು ಆರೋಪಿಸಿದ ಸಚಿವರು ಬೇಕಾದರೆ ಈ ಬಾರಿ 175.90 ಕೋಟಿ ಬಿಡುಗಡೆಯಾಗಿರುವ ಹಣದ ಬಗ್ಗೆ ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದೇವೆ ಎಂದು ಪರಿಪೂರ್ಣ ದಾಖಲೆಗಳನ್ನು ನೀಡುವುದಾಗಿ ಸವಾಲು ಹಾಕಿದರು.

ಎ.ಮಂಜು ಒಬ್ಬ ಅನಾಗರಿಕ ಎಂದು ಎಚ್.ಡಿ.ಕುಮಾರಸ್ವಾಮಿಯವರು ನೀಡಿರುವ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಅವರು ಯಾವ ರೀತಿ ಅನಾಗರೀಕರಾಗಿ ನಡೆದುಕೊಂಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು. ಇದೇ 29ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿ ನಾನು ರಾಜಕೀಯವಾಗಿ ಬೆಳೆದು ಬಂದ ಬಗ್ಗೆ ಸಂಪೂರ್ಣ ವಿವರವನ್ನು ಜನತೆಯ ಮುಂದಿಡುತ್ತೇನೆ ಹಾಗೂ ಗೌಡರು ಮತ್ತವರ ಕುಟುಂಬದ ಎಲ್ಲ ಅಕ್ರಮಗಳನ್ನೂ ಬಯಲಿಗೆಳೆಯುತ್ತೇನೆ ಎಂದ ಮಂಜು ನನ್ನ ಮೇಲಿನ ಆರೋಪಕ್ಕೆ 29ರಂದು ತಕ್ಕ ಉತ್ತರ ನೀಡುವುದಾಗಿ ಹೇಳಿದರು.

Facebook Comments

Sri Raghav

Admin