ಪೊಲೀಸ್ ಗೋಲಿಬಾರ್‍ಗೆ ಇಬ್ಬರ ಬಲಿ : ಅಸ್ಸಾಂ ಪ್ರಕ್ಷುಬ್ಧ

ಈ ಸುದ್ದಿಯನ್ನು ಶೇರ್ ಮಾಡಿ

Assam--02
ಗುವಾಹತಿ, ಜ.27-ತಮ್ಮ ಜಿಲ್ಲೆ ನಾಗಾಲ್ಯಾಂಡ್‍ಗೆ ಸೇರ್ಪಡೆಯಾಗುತ್ತಿದೆ ಎಂಬ ಆತಂಕದಿಂದ ಪ್ರತಿಭಟನೆ ನಡೆಸುತ್ತಿದ್ದ ಗುಂಪಿನ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‍ಗೆ ಇಬ್ಬರು ಬಲಿಯಾದ ನಂತರ ಅಸ್ಸಾಂನ ಪರ್ವತ ಪ್ರದೇಶ ದಿಮಾ ಹಸಾವೋ ಪ್ರಕ್ಷುಬ್ಧಗೊಂಡಿದೆ. ದಿಮಾಸ ಬುಡಕಟ್ಟು ಜನರ ಪ್ರಾಬಲ್ಯ ಹೊಂದಿರುವ ದಿಮಾ ಹಸಾವೋ ಜಿಲ್ಲೆಯನ್ನು ಗ್ರೇಟರ್ ನಾಗಾಲ್ಯಾಂಡ್ ಭಾಗವಾಗಿ ಸೇರಿಸಲಾಗುತ್ತಿದೆ ಎಂದು ಆರ್‍ಎಸ್‍ಎಸ್ ನಾಯಕರೊಬ್ಬರು ಹೇಳಿಕೆ ನೀಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ ಕಳೆದ ಕೆಲವು ದಿನಗಳಿಂದಲೂ ಈ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಕರೆ ನೀಡಲಾಗಿದ್ದ 12 ತಾಸುಗಳ ಬಂದ್ ವೇಳೆ ಮೈಬೊಂಗ್ ರೈಲ್ವೆ ನಿಲ್ದಾಣದಲ್ಲಿ ಉದ್ರಿಕ್ತ ಪ್ರತಿಭಟನೆಕಾರರು ರೈಲು ಹಳಿಗಳಿಗೆ ಹಾನಿ ಮಾಡಿ, ದಾಂಧಲೆ ನಡೆಸಿದರು. ಹಿಂಸಾಚಾರ ಹತ್ತಿಕ್ಕಲು ಪೊಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಐವರು ಗಾಯಗೊಂಡರು. ನಿನ್ನೆ ಸಂಜೆ ಇಬ್ಬರು ಮೃತಪಟ್ಟ ನಂತರ ಈ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಮತ್ತೆ ಹಿಂಸಾಚಾರ ಭುಗಿಲೆಳುವ ಸಾಧ್ಯತೆ ಹಿನ್ನೆಲೆಯಲ್ಲಿ ಪರ್ವತ ಜಿಲ್ಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

Facebook Comments

Sri Raghav

Admin