ಸಿಬ್ಬಂಧಿಗಳ ಪಿಎಫ್ ಹಣವನ್ನೂ ಕಟ್ಟಲಾಗದಷ್ಟು ಗತಿಗೆಟ್ಟ ಬಿಬಿಎಂಪಿ..!

ಈ ಸುದ್ದಿಯನ್ನು ಶೇರ್ ಮಾಡಿ

bbmp2

ಬೆಂಗಳೂರು, ಜ.27- ಬಿಬಿಎಂಪಿ ಇಷ್ಟು ಗತಿಗೆಟ್ಟಿದೆಯೇ..? ಪೌರ ಕಾರ್ಮಿಕರ ಬಿಬಿಎಂಪಿ ಸಿಬ್ಬಂದಿಯ ಪಿಎಫ್ ಹಣವನ್ನು ಕಟ್ಟಲಾರದೆ ಪರಿಸ್ಥಿತಿ ನಿರ್ಮಾಣವಾಗಿದೆಯೇ..? ಹೌದು, 2012ರಿಂದ ಈವರೆಗೆ ಬಿಬಿಎಂಪಿ ಸಿಬ್ಬಂದಿ ಪೌರ ಕಾರ್ಮಿಕರ ಪಿಎಫ್ ಹಣವನ್ನೇ ಪಾವತಿಸಿಲ್ಲ. ಇದಕ್ಕಾಗಿ ಭವಿಷ್ಯ ನಿಧಿ ಸಂಸ್ಥೆಯವರು ಬ್ಯಾಂಕ್ ಖಾತೆಗಳ ಜಫ್ತಿಯ ನೋಟಿಸ್ ನೀಡಿದ್ದಾರೆ.

ಬರೋಬ್ಬರಿ 212 ಕೋಟಿ ರೂ.ಗಳಷ್ಟು ಬಾಕಿ ಹಣವನ್ನು ಪಿಎಫ್ ಸಂಸ್ಥೆಗೆ ಪಾಲಿಕೆ ಕಟ್ಟಬೇಕಾಗಿದೆ. ಕಳೆದ 5 ವರ್ಷಗಳಿಂದ ಸಿಬ್ಬಂದಿಯ ಹಣವನ್ನೇ ಪಾವತಿಸಿಲ್ಲ. ಇದಕ್ಕಾಗಿ ಪಿಎಫ್ ಸಂಸ್ಥೆಯವರು ಹಲವಾರು ಬಾರಿ ನೋಟಿಸ್ ನೀಡಿದ್ದರೂ ಬಿಬಿಎಂಪಿಯವರು ಕೇರ್ ಮಾಡಿಲ್ಲ. ಹೀಗಾಗಿ ಪಿಎಫ್ ಅಧಿಕಾರಿಗಳು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆಯ ನೋಟಿಸ್ ನೀಡಿದ್ದಾರೆ. ಇದೊಂದು ನಾಚಿಕೆಗೇಡಿನ ಸಂಗತಿಯಾಗಿದೆ.

ಪೌರ ಕಾರ್ಮಿಕರ 90 ಕೋಟಿ ರೂ. ಸೇರಿದಂತೆ 212 ಕೋಟಿ ರೂ.ಗಳ ಸಿಬ್ಬಂದಿ ಹಣವನ್ನು ಪಿಎಫ್‍ಗೆ ಪಾವತಿಸದಿರುವುದಂತೆ ಪೌರ ಕಾರ್ಮಿಕರು, ಸಿಬ್ಬಂದಿಗಳು, ಅಧಿಕಾರಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕಷ್ಟಕಾಲಕ್ಕೆಂದು ಪಿಎಫ್ ಹಣ ವೇತನದಲ್ಲಿ ಕಡಿತ ಮಾಡಲಾಗುತ್ತದೆ. ಆದರೆ, ಸಂಬಂಧಿತ ಖಾತೆಗೆ ಅದು ಜಮವೇ ಆಗಿಲ್ಲ ಎಂದರೆ ಹೇಗೆ..? ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಸಿಕೊಳ್ಳುವಷ್ಟು ಮಟ್ಟಕ್ಕೆ ಬಿಬಿಎಂಪಿ ಹೋಗಿದ್ದಾದರೂ ಏಕೆ..? ಅಧಿಕಾರಿಗಳ ನಿರ್ಲಕ್ಷ್ಯವೇ..? ಆರ್ಥಿಕ ದಿವಾಳಿತನವೇ..? ಅಥವಾ ಪೌರ ಕಾರ್ಮಿಕರ ಸಿಬ್ಬಂದಿಗಳ ಬಗ್ಗೆ ಇರುವ ಉಡಾಫೆ ಧೋರಣೆ ಏನೆಂಬುದು ಅರ್ಥವಾಗುತ್ತಿಲ್ಲ. ಒಟ್ಟಾರೆ ಬ್ಯಾಂಕ್ ಖಾತೆ ಮುಟ್ಟುಗೋಲಿಗೆ ಪಿಎಫ್ ಸಂಸ್ಥೆಯವರು ನೋಟಿಸ್ ನೀಡಿದ್ದಾರೆ. ಸೋಮವಾರ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕು.

Facebook Comments

Sri Raghav

Admin