ಸೂಲಗಿತ್ತಿ ನರಸಮ್ಮ ನವರು ಪದ್ಮಶ್ರೀಗೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆ : ಜಿ.ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

sulagitti

ತುಮಕೂರು, ಜ.27- ಎಲೆ ಮರೆ ಕಾಯಿಯಂತಿದ್ದ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನರಸಮ್ಮ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಾ.ಜಿ.ಪರಮೇಶ್ವರ್, ಸಂಸದ ಮುದ್ದಹನುಮೇಗೌಡ , ಶಾಸಕ ರಫೀಕ್ ಅಹಮದ್ ಸೇರಿದಂತೆ ಮತ್ತಿತರ ಮುಖಂಡರು ಬೇಗ ಗುಣಮುಖರಾಗಲೆಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪರಮೇಶ್ವರ್ ಮಾತನಾಡಿ, ಬಡತನದಲ್ಲಿ ಬೆಳೆದ ನರಸಮ್ಮ ಅವರು ಇಂದು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರೆ ಹೆಮ್ಮೆಯ ಸಂಗತಿ. ಇದು ಜಿಲ್ಲೆಗೂ ಕೀರ್ತಿ ತರುವಂತಹ ವಿಷಯ. ಪಾವಗಡ ತಾಲ್ಲೂಕಿನಾದ್ಯಂತ ಮನೆ ಮಾತಾಗಿರುವ ನರಸಮ್ಮ ಅವರು 15,000ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿ ವೈದ್ಯ ಲೋಕಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ಶೀಘ್ರದಲ್ಲೇ ಟಿಕೆಟ್ ಗೊಂದಲ ನಿವಾರಣೆಯಾಗಲಿದ್ದು , ಸೂಕ್ತ ವ್ಯಕ್ತಿಗಳು ನಗರ ಹಾಗೂ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಕೊರಟಗೆರೆಯಲ್ಲಿ ಈ ಬಾರಿಯ ರಾಜಕೀಯ ಚಿತ್ರಣವೇ ಬದಲಾಗಲಿದೆ. ಮತದಾರರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ಸಾಧನೆಗಳು ಪ್ರತಿಯೊಬ್ಬ ಮತದಾರರಿಗೂ ನೆಚ್ಚಿಗೆಯಾಗಿದ್ದು , ಮತ್ತೆ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ.

Facebook Comments

Sri Raghav

Admin