ಆರತಕ್ಷತೆ ವೇಳೆಗೆ ವಧು, ಮಹೂರ್ತದ ಸಮಯಕ್ಕೆ ವರ ಜೂಟ್..! : ಮ್ಯಾರೇಜ್ ಮೂರಾಬಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

Marrige--02

ಕೋಲಾರ, ಜ.28- ಬಂಧು, ಬಳಗ , ಸ್ನೇಹಿತರು ಎಲ್ಲರೂ ಸಂಭ್ರಮದಿಂದ ಮದುವೆ ಮನೆಗೆ ಬಂದಿದ್ದರು. ಅಂದುಕೊಂಡಂತೆ ಎಲ್ಲಾ ಆಗಿದ್ದರೆ ಮದುವೆ ಚೆನ್ನಾಗಿಯೇ ಆಗ್ತಿತ್ತು. ಆದರೆ ವಧು-ವರ ಇಬ್ಬರು ನಾಪತ್ತೆಯಾಗಿರುವುದು ಇದೀಗ ಬಂದವರಿಗೆಲ್ಲಾ ಅಚ್ಚರಿ ಉಂಟು ಮಾಡಿದೆ. ಆರತಕ್ಷತೆ ವೇಳೆ ವಧು ನಾಪತ್ತೆಯಾದರೆ , ಬೆಳಗ್ಗೆ ಫೇಸ್ ವಾಶ್‍ಗೆ ಎಂದು ಸಲೂನ್‍ಗೆ ಹೋದ ವರ ಕೂಡ ಕಾಣೆಯಾಗಿದ್ದಾನೆ. ಇದರಿಂದಾಗಿ ಬಂಧು-ಬಳಗದಲ್ಲಿ ತಳಮಳಗೊಂಡು ಏನಾಯಿತು ಎಂದು ತಿಳಿದುಕೊಳ್ಳುವುದರಲ್ಲೇ ಎಲ್ಲರೂ ತಲ್ಲೀನರಾಗಿದ್ದರು.

ಅತ್ತ ಕೆಲವರು ಮದುವೆ ಊಟ ಮಾಡಿಕೊಂಡು ತಮ್ಮ ಪಾಡಿಗೆ ತಾವು ಹೊರಟಿದ್ದರು. ಇದೆಲ್ಲಾ ಪ್ರಸಂಗ ನಡೆದಿದ್ದು ಮಾಲೂರಿನಲ್ಲಿ. ಮಾಲೂರು ತಾಲ್ಲೂಕಿನ ಚಿನ್ನಕಲ್ಲು ಗ್ರಾಮದ ಸಿ.ಎನ್.ಗುರೇಶ್ ಹಾಗೂ ಬಂಗಾರಪೇಟೆ ತಾಲ್ಲೂಕಿನ ನೆರ್ಲಹಳ್ಳಿ ಗ್ರಾಮದ ಎನ್.ಸೌಮ್ಯ ಎಂಬ ವಧುವಿಗೂ ನಿನ್ನೆ ಮದುವೆ ನಿಶ್ಚಯವಾಗಿದ್ದು, ನಿನ್ನೆ ಮತ್ತು ಇಂದು ಮದುವೆ ನಡೆಯಬೇಕಿತ್ತು.

ಕಲ್ಯಾಣ ಮಂಟಪಕ್ಕೆ ನಿನ್ನೆ ಮಧ್ಯಾಹ್ನವೇ ವಧುವಿನ ಕಡೆಯವರೆಲ್ಲಾ ಬಂದಿದ್ದರು. ನಂತರ ವರನನ್ನು ಕೂಡ ಬರಮಾಡಿಕೊಂಡು ಎಲ್ಲೆಡೆ ಸಂತಸ ಮನೆ ಮಾಡಿತ್ತು.ಆರತಕ್ಷತೆ ಸಮಯ ಆಗುತ್ತಿದ್ದಂತೆಯೇ ವಧು ಸೌಮ್ಯ ಎಲ್ಲೂ ಕಾಣಲೇ ಇಲ್ಲ. ಆಗ ಆತಂಕಗೊಂಡ ಪೋಷಕರು ಆಕೆಯ ಮೊಬೈಲ್‍ಗೆ ಕರೆ ಮಾಡಿದರೂ ಅದು ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಮತ್ತಷ್ಟು ಚಿಂತಿತರಾಗಿದ್ದರು. ರಾತ್ರಿ 9 ಗಂಟೆಯಾದರೂ ವಧು ಬಾರದಿದ್ದಾಗ ಅನುಮಾನ ಹೆಚ್ಚಾಗಿ ವರನ ಕಡೆಯವರು ವಿಚಾರಿಸಲು ಬಂದಾಗ ಸೌಮ್ಯ ಇಲ್ಲದಿರುವುದು ಗೊತ್ತಾಯಿತು. ರಾತ್ರಿ ತಕ್ಷಣ ರಾಜಿ ಪಂಚಾಯ್ತಿಗಳೆಲ್ಲಾ ನಡೆದು ನಿಗದಿತ ಮುಹೂರ್ತದಲ್ಲೇ ಮದುವೆ ಕಾರ್ಯ ನಡೆಸಲು ನಿಶ್ಚಯಿಸಿದರು. ಹುಡುಗನನ್ನು ಕರೆದು ಸೌಮ್ಯಳ ತಂಗಿಯನ್ನು ವಿವಾಹವಾಗುವಂತೆ ಮನವೊಲಿಸಿದರು. ಇದರಿಂದಾಗಿ ಎಲ್ಲರೂ ನಿಟ್ಟುಸಿರು ಬಿಟ್ಟು ಬೆಳಗಿನ ಮದುವೆ ಕಾರ್ಯದಲ್ಲಿ ತೊಡಗಿಕೊಂಡರು. ಮುಂಜಾನೆ ಶಾಸ್ತ್ರ ಕಾರ್ಯಗಳೆಲ್ಲಾ ನಡೆದು ವರ ಗುರೇಶ್ ಸ್ನೇಹಿತರು ಬಂದಿದ್ದಾರೆ. ಫೇಶಿಯಲ್ ಮಾಡಿಕೊಂಡು ಬರುತ್ತೇನೆ ಎಂದು ಹೋದವನು ಎಷ್ಟು ಹೊತ್ತಾದರೂ ಆತ ಬರದಿದ್ದಾಗ ಬಂದಿದ್ದ ಬಂಧು ಬಳಗದವರಲ್ಲಿ ಗುಸು ಗುಸು ಶುರವಾಗಿ ಅದರಂತೆ ವರ ಕೂಡ ನಾಪತ್ತೆಯಾಗಿದ್ದ…!

Facebook Comments

Sri Raghav

Admin