ಕಾಫಿ ತೋಟದಲ್ಲಿ ಕಾರ್ಮಿಕನನ್ನು ತಿವಿದು ಕೊಂದ ಕಾಡುಕೋಣ

ಈ ಸುದ್ದಿಯನ್ನು ಶೇರ್ ಮಾಡಿ

bison-kadukona-1
ಮೂಡಿಗೆರೆ, ಜ.28- ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನಿಗೆ ಕಾಡುಕೋಣ ತಿವಿದು ಸಾವನ್ನಪ್ಪಿರುವ ಘಟನೆ ಬಸ್ನಿ ಗ್ರಾಮ ಸಮೀಪದ ತೋಟದಲ್ಲಿ ನಡೆದಿದೆ. ಬಳ್ಳಾರಿ ಮೂಲದ ಕುಮಾರ್ (25) ಕಾಡುಕೋಣದಿಂದ ತಿವಿತಕ್ಕೊಳಗಾಗಿ ಮೃತಪಟ್ಟ ದುರ್ದೈವಿ. ನಾಗರಾಜ್‍ಗೌಡ ಎಂಬುವರಿಗೆ ಸೇರಿದ ಕಾಫಿ ತೋಟಕ್ಕೆ ಕೆಲಸಕ್ಕೆಂದು ಬಂದಿದ್ದ ಈತ ಕೆಲಸ ಮಾಡುವ ಸಂದರ್ಭದಲ್ಲಿ ಏಕಾಏಕಿ ಕಾಡುಕೋಣ ತಿವಿದಿದ್ದು, ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಜರುಗಿಸಲಾಗಿದೆ.

Facebook Comments

Sri Raghav

Admin