‘ಜೂನಿಯರ್ಸ್‍ ಸಿಂಗರ್’

ಈ ಸುದ್ದಿಯನ್ನು ಶೇರ್ ಮಾಡಿ

singaers

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಮನೋ ಅವರ ಸಾರಥ್ಯದಲ್ಲಿ ನಡೆದ ಉದಯ ಸಿಂಗರ್ ಜೂನೀಯರ್ಸ್ ಈ ಕೊನೆಯ ಘಟ್ಟಕ್ಕೆ ತಲುಪಿದೆ. ಇದೆ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯಟಿವಿಯಲ್ಲಿ ಉದಯ ಸಿಂಗರ್ ಜೂನೀಯರ್ಸ್ ಫಿನಾಲೆ ಪ್ರಸಾರವಾಗಲಿದೆ. 16 ಮಕ್ಕಳಿದ್ದ ಸಿಂಗಿಂಗ್ ಶೋ ಫಿನಾಲೆಯ ಹೊತ್ತಿಗೆ 5 ಮಕ್ಕಳಿಂದ ಕೂಡಿದ್ದು ಅದರಲ್ಲಿ ಒಬ್ಬರನ್ನು ಉದಯ ಸಿಂಗರ್ ಜೂನಿಯರ್ ಎಂದು ಘೋಷಿಸಲಾಗುವುದು.

ಸುಮಾರು ದಿನಗಳಿಂದ ನಡೆದು ಬಂದ ಶೋನಲ್ಲಿ ವಿಭಿನ್ನ ರೀತಿಯ ಸಂಚಿಕೆ ಗಳು ಪ್ರಸಾರವಾದವು.ಅಲ್ಲದೆ ಚಿತ್ರರಂಗದ ಹೆಸರಾಂತ ನಟ ನಟಿಯರಾದ ಮಾಲಾಶ್ರೀ, ಪ್ರೇಮಾ, ಚೇತನ್, ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಕಾರುಣ್ಯಾ ರಾಮ್ ಮತ್ತು ಸಂಗೀತಕ್ಷೇತ್ರದ ಅರ್ಚನಾ ಉಡುಪಾ,ಪ್ರವೀಣ್.ಡಿ ರಾವ್,ಪೂರ್ಣಚಂದ್ರ ತೇಜಸ್ವಿ.ಕೆ.ಕಲ್ಯಾಣ್, ಅನುರಾಧಾ ಭಟ್, ಶ್ರೀಧರ್, ಸಂಭ್ರಮ್ ಹೆಸರಾಂತ ನಿರ್ದೇಶಕರುಗಳಾದ ಭಾರ್ಗವ ಮತ್ತು ಯೋಗರಾಜ್ ಭಟ್ ಭಾಗವಹಿಸಿ ಮಕ್ಕಳಿಗೆ ಶುಭಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.

Facebook Comments