ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡ ಕಡ್ಡಾಯವಾಗಲಿ : ಸಾಹಿತಿ ಗೊ.ರು.ಚನ್ನಬಸಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

kannada
ಬೆಂಗಳೂರು, ಜ.29- ಕೇಂದ್ರೋದ್ಯಮಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಮಾತ್ರ ಆಡಳಿತ ನಡೆಯುತ್ತಿರುವುದು ವಿಷಾದನೀಯ. ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಅದನ್ನು ಪಾಲಿಸಬೇಕು ಎಂದು ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಒತ್ತಾಯಿಸಿದ್ದಾರೆ. ವಿಮಾನ ಕಾರ್ಖಾನೆ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಷ್ಟೋ ಉದ್ಯಮಗಳಲ್ಲಿ ತ್ರಿಭಾಷಾ ಸೂತ್ರ ದನ್ವಯ ಕನ್ನಡಕ್ಕೆ ಕೊಡಬೇಕಾದ ಮಾನ್ಯತೆ ನೀಡದಿರುವುದು ದುರಾದೃಷ್ಟಕರ. ಕನ್ನಡದಲ್ಲಿ ವ್ಯವಹರಿಸುವ ಅಭ್ಯಾಸ ಅನ್ಯ ಭಾಷಿಗರು ರೂಢಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ನಮ್ಮ ಮಕ್ಕಳಿಗೂ ಸಹ ಕನ್ನಡ ಕಲಿಸಿ. ಭಾಷೆಯ ಮೇಲೆ ಅಭಿಮಾನ ಮೂಡಿಸುವಂತಹ ಕಾರ್ಯಗಳು ನಡೆಯಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಲಿಂಗ ರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಖಾನೆಯ ವಿಮಾನ ವಿಭಾಗದ ಅಪರ ಮಹಾ ವ್ಯವಸ್ಥಾಪಕ ಪಿ.ಕೆ.ವರ್ಮ ಹಾಜರಿದ್ದರು. ಸಂಘದ ಅಧ್ಯಕ್ಷ ಆರ್.ರಾಮಸ್ವಾಮಿ , ಸೋಮೇಶ್ವರ , ಸುಧಾಕರ್, ಕನ್ನಡ ಪರ ಚಿಂತಕ, ಹೋರಾಟಗಾರ ಬಾ.ಹ. ಉಪೇಂದ್ರ, ಕರ್ನಾಟಕ ಕಾರ್ಮಿಕ ಲೋಕದ ಬಿ.ವಿ. ರವಿಕುಮಾರ್ ಸೇರಿದಂತೆ ಹಲವು ಕನ್ನಡ ಸಂಘಟನೆಗಳವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Facebook Comments

Sri Raghav

Admin