ನೊಬೆಲ್ ಪುರಸ್ಕೃತೆ ಮಲಾಲಗೆ ಭಾರತಕ್ಕೆ ಬರುವ ಬಯಕೆಯಂತೆ

ಈ ಸುದ್ದಿಯನ್ನು ಶೇರ್ ಮಾಡಿ

Malala--01

ದಾವೋಸ್, ಜ.29-ಭಾರತದಲ್ಲಿ ತಮಗೆ ಲಭಿಸುತ್ತಿರುವ ಬೆಂಬಲ ಮತ್ತು ಅಭಿಮಾನಗಳಿಂದ ಉತ್ತೇಜನಗೊಂಡಿರುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕøತೆ ಮತ್ತು ಪಾಕಿಸ್ತಾನದ ಖ್ಯಾತ ಸಾಮಾಜಿಕ ಕಾರ್ಯಕರ್ತೆ ಮಲಾಲ ಯೂಸುಫ್ ಝಾಯ್, ಹಿಂದೂಸ್ತಾನಕ್ಕೆ ಭೇಟಿ ನೀಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಭಾರತದ ಬಾಲಕಿಯರಿಗೆ ಶಿಕ್ಷಣದ ನೆರವು ನೀಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.
ಸ್ವಿಟ್ಜರ್‍ಲೆಂಡ್‍ನ ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಮಲಾಲ ಭಾರತಕ್ಕೆ ಭೇಟಿ ನೀಡಲು ತಾವು ಉತ್ಸುಕವಾಗಿರುವುದಾಗಿ ಹೇಳಿದರು.
ವಿಶ್ವದಾದ್ಯಂತ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನಿಧಿ ಸಂಗ್ರಹಣೆಗಾಗಿ ಮಲಾಲ ಫಂಡ್ ಕಾರ್ಯಕ್ರಮದ ಸಹ ಸಂಸ್ಥಾಪಕಿಯಾಗಿರುವ ಇವರು ಈ ಯೋಜನೆಯ ಉಪಕ್ರಮಗಳಲ್ಲಿ ಒಂದಾದ ಗುಲ್ಮಾಖಾಯ್ ನೆಟ್‍ವರ್ಕ್‍ನನ್ನು ಭಾರತದಲ್ಲೂ ವಿಸ್ತರಿಸಲು ಬಯಸಿದ್ದಾರೆ.
ಭಾರತದಲ್ಲಿ ತಮಗೆ ಅದ್ಭುತ ಬೆಂಬಲ ದೊರೆತಿದೆ. ಅದಕ್ಕಾಗಿ ಪ್ರತಿಯೊಬ್ಬ ಭಾರತೀಯರಿಗೂ ನಾನು ಕೃತಜ್ಞಳಾಗಿದ್ದೇನೆ. ನನಗೆ ಬೆಂಬಲ ಮತ್ತು ಸಹಕಾರ ಸೂಚಿಸಿ ಭಾರತದಿಂದ ಅಸಂಖ್ಯಾತ ಪತ್ರಗಳು ಬಂದಿವೆ ಎಂದು ಮಲಾಲ ತಿಳಿಸಿದರು.

Facebook Comments

Sri Raghav

Admin