ಬಡೆಕೊಳ್ಳ ಮಠದಲ್ಲಿ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ

ಈ ಸುದ್ದಿಯನ್ನು ಶೇರ್ ಮಾಡಿ

CCTV01

ಬೆಳಗಾವಿ, ಜ.29- ತಾಲೂಕಿನ ಬಡೆಕೊಳ್ಳ ಮಠದಲ್ಲಿ ಕಳ್ಳರು ಗದ್ದುಗೆಯ ಮೇಲಿಂದ ಬೆಳ್ಳಿ ಆಭರಣ ಹಾಗೂ ಕಾಳಿಕಾ ದೇವಿಯ ಚಿನ್ನ , ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ಸುಮಾರು 2 ಲಕ್ಷ 40 ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. ಮಠದ ನಾಗೇಂದ್ರ ಅಜ್ಜನವರ 65 ಸಾವಿರ ಮೌಲ್ಯದ 1 ಕೆಜಿ 4 ಗ್ರಾಂ ಬೆಳ್ಳಿಯ ಮುಖವಾಡ, 22 ಸಾವಿರ 500 ರೂ. ಮೌಲ್ಯದ ಅರ್ಧ ಕೆಜಿ ಬೆಳ್ಳಿ ಪಾದುಕೆಗಳು ಸೇರಿದಂತೆ 2.40 ಲಕ್ಷ ರೂಪಾಯಿ ಮೌಲ್ಯದ ನಗ ನಾಣ್ಯ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ನಿನ್ನೆ ತಡರಾತ್ರಿ ಈ ಕೃತ್ಯ ನಡೆದಿದ್ದು, ಸಿಸಿ ಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಈ ಕುರಿತು ಹಿರೇ ಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin