ಬೆಂಗಳೂರಲ್ಲಿ ಮುತ್ತೂಟ್ ಫೈನಾನ್ಸ್ ಕಳ್ಳತನಕ್ಕೆ ವಿಫಲ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Muthoot-finance-02

ಬೆಂಗಳೂರು, ಜ.29- ನಗರದ ಮುತ್ತೂಟ್ ಫೈನಾನ್ಸ್ ಕಚೇರಿಯ ಕಿಟಕಿ ಮುರಿದು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದಂತೆ ಸೈರನ್ ಕೂಗಿಕೊಂಡ ಪರಿಣಾಮ ಕಳ್ಳರು ಅಲ್ಲಿಂದ ಕಾಲ್ಕಿತ್ತಿರುವ ಘಟನೆ ಜೆ.ಜೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ರಸ್ತೆಯಲ್ಲಿ ಮುತ್ತೂಟ್ ಫೈನಾನ್‍ಯಿದ್ದು, ರಾತ್ರಿ ಕಳ್ಳರು ಫೈನಾನ್ಸ್ ಕಚೇರಿಯ ಕಟ್ಟಡದ ಕಿಟಕಿ ಮುರಿದು ಒಳನುಗ್ಗಿದ್ದಾರೆ. ಈ ವೇಳೆ ಸೈರನ್ ಕೂಗಿಕೊಳ್ಳುತ್ತಿದ್ದಂತೆ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದು ಮುತ್ತೂಟ್ ಫೈನಾನ್ಸ್‍ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಘಟನೆ ಸಂಬಂಧ ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin