ಚಿಕ್ಕಬಳ್ಳಾಪುರಕ್ಕೆ ಪವರ್ ಸ್ಟಾರ್ ಬಂದಿದ್ದ ಉದ್ದೇಶವೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Pawar-Star--02
ಚಿಕ್ಕಬಳ್ಳಾಪುರ, ಜ.30- ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿರುವ ವಿವಿಧ ಪಕ್ಷಗಳ ಹಾಗೂ ಪಕ್ಷೇತರರ ಸ್ಪರ್ಧಾಳುಗಳ ಪರವಾಗಿ ಪ್ರಚಾರ ನಡೆಸಲು ಬಣ್ಣದ ಲೋಕದ ಖ್ಯಾತ ಸಿನಿ ನಟರು ಚಿಕ್ಕಬಳ್ಳಾಪುರಕ್ಕೆ ಪಾದಾರ್ಪಣೆ ಮಾಡಲಾರಂಭಿಸಿದ್ದಾರೆ. ಚಿಕ್ಕಬಳ್ಳಾಪುರ ಆಂಧ್ರದ ಗಡಿಗೆ ಹೊಂದಿಕೊಂಡಿದ್ದು ಇಲ್ಲಿ ತೆಲುಗಿನ ಪ್ರಭಾವ ಹೇರಳ. ಅಂತೆಯೇ ತೆಲುಗು ಚಿತ್ರರಂಗದ ನಾಯಕ ನಟರೆಂದರೆ ಈ ಭಾಗದ ಜನರಿಗೆ ಎಲ್ಲಿಲ್ಲದ ಅಭಿಮಾನ. ಇದಕ್ಕೆ ತಕ್ಕನಾಗಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ತೆಲುಗು ಬಣ್ಣದ ಲೋಕದ ನಾಯಕ ನಟರನ್ನು ಕರೆ ತಂದು ತಮ್ಮ ಪರವಾಗಿ ಪ್ರಚಾರ ನಡೆಸುವ ತಂತ್ರಗಾರಿಕೆ ಶುರುವಾಗಿದೆ.

ಅದರಂತೆ ಮುಂದಿನ ವಿಧಾನಸಭೆಗೆ ಸ್ಪರ್ಧೆ ಮಾಡಲಿಚ್ಛಿಸಿರುವ ಪ್ರಭಾವಿ ಸ್ಪರ್ಧಾಳುಗಳಲ್ಲಿ ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ.ನವೀನ್‍ಕಿರಣ್ ಓರ್ವರು. ಇವರು ಬಲಜಿಗ ಜನಾಂಗದಲ್ಲಿ ಪ್ರಭಾವಿ ನಾಯಕನಾಗಿದ್ದರೂ ರಾಜಕೀಯ ಚತುರತೆಯನ್ನು ಮೈಗೂಡಿಸಿಕೊಂಡಿರುವ ನಾಯಕರೂ ಹೌದು. ಕೆ.ವಿ. ಮತ್ತು ಪಂಚಗಿರಿ ಟ್ರಸ್ಟ್‍ನ ಅಧ್ಯಕ್ಷ ಹಾಗೂ ಯುವ ಮುಖಂಡ ಕೆ.ವಿ.ನವೀನ್ ಕಿರಣ್ ಅವರಿಗೆ ಬೆಂಬಲ ಸೂಚಿಸುವ ಸಲುವಾಗಿ ಕೆ.ವಿ.ಕ್ಯಾಂಪಸ್‍ನ ಅವರ ಮನೆಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಆಗಮಿಸಿದ್ದರು.
ಪವನ್ ಕಲ್ಯಾಣ್ ನವೀನ್‍ಕಿರಣ್ ಅವರ ಮನೆಗೆ ಬರುವ ಸುದ್ಧಿ ತಿಳಿದ ಅವರ ಸಾವಿರಾರು ಅಭಿಮಾನಿಗಳು ನವೀನ್ ಕಿರಣ್ ಮನೆ ಬಳಿ ಜಮಾಯಿಸಿದರು. ಅವರನ್ನು ನೋಡಲು ಮುಗಿಬಿದ್ದರು. ಸಂಜೆ 5 ಗಂಟೆ ಸುಮಾರಿಗೆ ನವೀನ್ ಕಿರಣ್ ಮನೆ ಬಳಿ ಸಹಸ್ರಾರು ಮಂದಿ ಹರಿದು ಬಂದರು. ತೆರದ ವಾಹನದಲ್ಲಿ ಬಂದ ಪವನ್ ಕಲ್ಯಾಣ್ ಅವರು ಅಭಿಮಾನಿಗಳತ್ತ ಕೈ ಬೀಸಿದಾಗ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕಾಂಪೌಂಡ್‍ನ ಗೋಡೆ, ಮರಗಳ ಮೇಲೆ ಅಭಿಮಾನಿಗಳು ಕುಳಿತು ಪವರ್‍ಸ್ಟಾರ್ ಪವನ್ ಕಲ್ಯಾಣ್ ಅವರನ್ನು ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಪವನ್ ಕಲ್ಯಾಣ್ ನವೀನ್ ಕಿರಣ್ ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರಾರು ಮಂದಿಗೆ ವಿದ್ಯಾದಾನ ಮಾಡಿಕೊಂಡು ಬಂದಿರುವುದು ಅವರ ಕಾರ್ಯ ವೈಖರಿಗಳಲ್ಲಿ ಒಂದು ಸಮಾಜ ಸೇವೆಯಲ್ಲಿ ತೊಡಗಿರುವ ನವೀನ್‍ಕಿರಣ್ ಬಗ್ಗೆ ನನಗೆ ಅಪಾರವಾದ ಗೌರವವಿದೆ ನಡೆಸುವುದರ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ನೀವು ಅವರ ಮೇಲೆ ಇಟ್ಟಿರುವ ಅಭಿಮಾನ ಪ್ರೀತಿ ಕಂಡು ನನಗೆ ತುಂಬ ಖುಷಿಯಗಿದೆ. ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಲಿರುವ ಇವರಿಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

Facebook Comments

Sri Raghav

Admin