8 ತಿಂಗಳ ಹಸುಳೆ ಮೇಲೆ ಅತ್ಯಾಚಾರವೆಸಗಿದ ಕಾಮುಕ..!

ಈ ಸುದ್ದಿಯನ್ನು ಶೇರ್ ಮಾಡಿ

Girl-Rape--02

ನವದೆಹಲಿ, ಜ.30-ರಾಜಧಾನಿ ದೆಹಲಿಯಲ್ಲಿ ನಡೆದ ಅತ್ಯಂತ ನೀಚ ಕೃತ್ಯವೊಂದರಲ್ಲಿ 28 ತಿಂಗಳ ಯುವಕನೊಬ್ಬ 8 ವರ್ಷ ಹಸುಳೆ ಮೇಲೆ ಅತ್ಯಾಚಾರ ಎಸಗಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಈ ಕೃತ್ಯ ಎಸಗಿ ಪರಾರಿಯಾಗಿದ್ದ ಕಾಮುಕನನ್ನು ದೆಹಲಿ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಈತ ಮಗುವಿಗೆ ಹತ್ತಿರದ ಸಂಬಂಧಿಯಾಗಿದ್ದು ಅದೇ ಕಟ್ಟಡದಲ್ಲಿ ನೆಲೆಸಿದ್ದ.

ದೆಹಲಿಯ ಸುಭಾಷ್ ನಗರದಲ್ಲಿ ಈ ಘಟನೆ ನಡೆದಿದೆ. ಮಗುವಿನ ತಂದೆ ಕೂಲಿ ಕಾರ್ಮಿಕ ಮತ್ತು ತಾಯಿ ಮನೆಗೆಲಸ ಮಾಡುತ್ತಿದ್ಧಾರೆ. ಭಾನುವಾರ ಮಧ್ಯಾಹ್ನ ಯಾರೂ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ದುಷ್ಕರ್ಮಿಯು ಮಗುವಿನ ಮೇಲೆ ದುರಾಚಾರ ಎಸಗಿ ಪರಾರಿಯಾದ.  ಸ್ವಲ್ಪ ಹೊತ್ತಿನ ನಂತರ ಮನೆಗೆ ಹಿಂದಿರುಗಿದ ತಾಯಿಗೆ ಮಗು ರಕ್ತಸ್ರಾವದಿಂದ ಅಳುತ್ತಿದ್ದುದನ್ನು ನೋಡಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಹಸುಳೆಗೆ ಶಸ್ತ್ರಕ್ರಿಯೆ ನಡೆಸಲಾಯಿತು.  ಈ ಘಟನೆ ನಂತರ ತಲೆಮರೆಸಿಕೊಂಡಿದ್ದ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ನಡೆದಿರುವುದನ್ನು ಒಪ್ಪಿಕೊಂಡ. ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ.

Facebook Comments

Sri Raghav

Admin