ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಕೆಲಸವನ್ನು ಆರಂಭ ಮಾಡದೆ ಇರುವುದು ಮೊದಲನೆಯ ಬುದ್ಧಿಲಕ್ಷಣ. ಆದರೆ ಹಾಗೆ ಪ್ರಾರಂಭಿಸಿದ ಕೆಲಸವನ್ನು ಮುಗಿಸುವುದು ಎರಡನೆಯ ಬುದ್ಧಿಲಕ್ಷಣ – ಪಂಚತಂತ್ರ, ಕಾಕೋಲೂಕೀಯ

 ಪಂಚಾಂಗ : ಬುಧವಾರ 31.01.2018

ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.20
ಚಂದ್ರ ಉದಯ ಸಂ.6.16 / ಚಂದ್ರ ಅಸ್ತ ರಾ.6.19
ಹೇವಿಳಂಅಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಶುಕ್ಲ ಪಕ್ಷ / ತಿಥಿ : ಪೂರ್ಣಿಮಾ (ಸಾ.6.57)
ನಕ್ಷತ್ರ: ಪುಷ್ಯ (ಸಾ.5.36) / ಯೋಗ: ಆಯುಷ್ಮಾನ್ (ರಾ.2.26)
ಕರಣ:ಭದ್ರೆ-ಬಾಲವ-ಕೌಲವ (ಬೆ.8.39-ಸಾ.6.57-ರಾ.5.18)
ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ, ತೇದಿ: 18

ಇಂದಿನ ವಿಶೇಷ : ಮಾಘ ಪೂರ್ಣಿಮಾ, ಸತ್ಯನಾರಾಯಣ ಪೂಜ, ಭಾರತ ಹುಣ್ಣಿಮೆ, ಚಂದ್ರಗ್ರಹಣ ಕಾಣಿಸುವುದು, ಆಚರಣೆ ಇದೆ. ಪ್ರಾರಂಭ ಸಾ.5.18, ಅಂತ್ಯ ರಾ.8.42.

ರಾಶಿ ಭವಿಷ್ಯ :

ಮೇಷ : ಮಹಿಳೆಯರಿಗೆ ಅನಾವಶ್ಯಕ ಋಣಾತ್ಮಕ ಚಿಂತನೆಗಳು ಕಾಡುವ ಸಂಭವವಿದೆ
ವೃಷಭ : ಆಪ್ತ ಸ್ನೇಹಿತರು ನಿಮ್ಮ ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವರು, ಎಚ್ಚರಿಕೆಯಿಂದಿರಿ
ಮಿಥುನ: ಆಕಸ್ಮಿಕ ಧನವ್ಯಯದಿಂದ ಕಾರ್ಯ ಸಿದ್ಧಿಗೆ ಕಿರಿಕಿರಿ ಎನಿಸಿ ಕೊಂಚ ಬೇಸರವೆನಿಸಲಿದೆ
ಕಟಕ : ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಶೀಘ್ರ ವಿವಾಹ ಆಗುವುದು
ಸಿಂಹ: ಉನ್ನತ ಹುದ್ದೆಯ ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿ ವರ್ಗದವರ ಕಿರಿಕಿರಿಯಿದೆ
ಕನ್ಯಾ: ಮನೆಯಲ್ಲಿ ಸತ್ಕಾರ್ಯಗಳ ನಿರ್ವಹಣೆ ಜತೆಗೆ ಬೌದ್ಧಿಕ ಕಾರ್ಯಗಳ ಸಂಭ್ರಮ ನಡೆಯಲಿದೆ
ತುಲಾ: ಅಧಾರ್ಮಿಕವಾಗಿ ನಡೆದುಕೊಳ್ಳುವುದರಿಂದ ಪಶ್ಚಾತ್ತಾಪ ಪಡುವಿರಿ
ವೃಶ್ಚಿಕ: ಗೃಹ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಧನುಸ್ಸು: ಅಧಿಕ ಧನವ್ಯಯವಾದರೂ ಸಮಾಧಾನ ಸಿಗಲಿದೆ
ಮಕರ: ಸಮಾಜ ಸೇವೆಯಲ್ಲಿ ಸಾಧನೆ ಮಾಡುವಿರಿ
ಕುಂಭ: ವಿದ್ಯಾರ್ಥಿಗಳಿಗೆ ಸಾಧಾರಣ ಪ್ರಗತಿ ಇದೆ
ಮೀನ: ಆಕಸ್ಮಿಕ ಉದ್ಯೋಗ ಒದಗಿ ಬರಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin