ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ ರಾಜ್ಯದಲ್ಲೇ ಮೊದಲ ‘ಪಂಚಾಯ್ತಿ ಊಟದ ಮನೆ’ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Panchalat-Otada-MAne

ಆನೇಕಲ್, ಜ.31- ರಾಜ್ಯದಲ್ಲೇ ಮೊದಲ ಬಾರಿಗೆ ಮರಸೂರು ಗ್ರಾಮ ಪಂಚಾಯಿತಿ ಬಡವರಿಗೆ ಕಡಿಮೆದರದಲ್ಲಿ ಊಟ ಹಾಗೂ ಉಪಾಹಾರ ಒದಗಿಸಲು ಇಂದಿರಾ ಕ್ಯಾಂಟಿನ್ ಮಾದರಿಯ ಪಂಚಾಯಿತಿ ಊಟದ ಮನೆ ಪ್ರಾರಂಭ. ಪಂಚಾಯಿತಿ ಊಟದ ಮನೆಯನ್ನು ಉದ್ಘಾಟಿಸಿದ ಶಾಸಕ ಬಿ.ಶಿವಣ್ಣ ಮಾತನಾಡಿ, ರಾಜ್ಯದಲ್ಲೇ ಇಂತಹ ವಿಭಿನ್ನ ಸಾಹಸಕ್ಕೆ ಕೈಹಾಕಿರುವ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ್ ರೆಡ್ಡಿ ಅವರ ಕಾರ್ಯ ಮೆಚ್ಚುವಂತದ್ದು, ಇದೇ ಮಾದರಿಯಲ್ಲಿಯೇ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಕಾಯ್ಯೋನ್ಮುಖರಾಗಬೇಕು ಎಂದು ಹೇಳಿದರು.

ಮರಸೂರು ಗ್ರಾಪಂ ಅಧ್ಯಕ್ಷ ಪುರುಷೋತ್ತಮ್ ರೆಡ್ಡಿ ಮಾತನಾಡಿ, ಹಸಿವು ಮುಕ್ತ ಪಂಚಾಯಿತಿಯನ್ನಾಗಿ ಮಾಡಬೇಕು ಎಂಬುವ ಪರಿಕಲ್ಪನೆ ಜೊತೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಹಾಗೂ ಶಾಲಾ ಮಕ್ಕಳು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು ಎಂಬ ಉದ್ದೇಶದಿಂದ ಈ ಕ್ಯಾಂಟಿನ್ ತೆರೆಯಲಾಗಿದೆ ಎಂದರು. ಪಂಚಾಯತಿ ಪಿಡಿಒ ಶಶಿಕಿರಣ್ ಮಾತನಾಡಿ, ದಿನಕ್ಕೆ ಆದಾಯ ಬರುವ 2 ಸಾವಿರ ರೂಪಾಯಿಯನ್ನು ಬಳಸಿಕೊಂಡು, ಅವಶ್ಯಕತೆ ವಿದ್ದರೆ ಪಂಚಾಯತಿ ವರ್ಗ ಒಂದರ ನಿಧಿಯಿಂದ ಕ್ಯಾಂಟಿನ್‍ಗೆ ಬೇಕಾದ ವೆಚ್ಚವನ್ನು ಬರಿಸಲಾಗುವುದು, ಪ್ರಾರಂಭದಲ್ಲಿ ಉಪಾಹಾರ 100 ಹಾಗೂ ಊಟ 100 ಜನರಿಗೆ ವ್ಯವಸ್ಥೆ ಮಾಡಲಾಗಿದೆ, ಬೇಡಿಕೆ ಬಂದರೆ ಇದನ್ನು ಹೆಚ್ಚಿಸಲಾಗವುದು ಎಂದರು.

ಜಿಪಂ ಸದಸ್ಯ ಬಂಡಾಪುರ ರಾಮಚಂದ್ರ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಟಿ.ಕೆ.ರಮೇಶ್, ಗ್ರಾಪಂ ಉಪಾದ್ಯಕ್ಷೆ ಪ್ರೇಮ ಕಾವೇರಪ್ಪ, ಸದಸ್ಯರಾದ ಪ್ರಭಾಕರ್, ರಾಧಮ್ಮ, ಮನು, ನಿರ್ಮಲಾ ಆನಂದ್, ಎಸ್.ಟಿ.ಡಿ ರಮೇಶ್, ಕೃಷ್ಣಪ್ಪ, ಚಂದ್ರಪ್ಪ, ಪಿಡಿಒ ಶಶಿಕಿರಣ್ ಮತ್ತಿತರು ಹಾಜರಿದ್ದರು.

Facebook Comments

Sri Raghav

Admin