ಕುರಿ, ಮೇಕೆ ಸತ್ತರೆ 2500 ರೂ. ಪರಿಹಾರ । ಉಣ್ಣೆ-ಚರ್ಮ ಸಂಗ್ರಹಣ ಗೋದಾಮು ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

A-Manju--023

ಬೆಂಗಳೂರು,ಜ.31-ರಾಜ್ಯದಲ್ಲಿ ಉಣ್ಣೆ ನೀಡುವ ಕುರಿಗಳನ್ನು ಹೆಚ್ಚಾಗಿ ಹೊಂದಿರುವ ಜಿಲ್ಲೆಗಳಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಉಣ್ಣೆ ಮತ್ತು ಚರ್ಮ ಸಂಗ್ರಹಣ ಗೋದಾಮು ನಿರ್ಮಾಣ ಮಾಡಲಾಗುವುದು ಎಂದು ಸಚಿವ ಎ.ಮಂಜು ಭರವಸೆ ನೀಡಿದರು.  ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಮ್ಮಿಕೊಂಡಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಡಿ ಘಟಕ ನಿರ್ಮಾಣಕ್ಕೆ 13.5 ಲಕ್ಷ ಸಹಾಯಧನ ನೀಡಲಾಗುವುದು ಎಂದರು. ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಆಕಸ್ಮಿಕವಾಗಿ ಮರಣ ಹೊಂದಿದ ಕುರಿ, ಮೇಕೆ ಮರಿಗಳಿಗೆ ಪರಿಹಾರ ಧನವಾಗಿ ತಲಾ 2500 ರೂ. ನೀಡಲಾಗುವುದು. 6 ತಿಂಗಳ ವಯಸ್ಸಿನ ನಂತರ ಮರಣಿಸಿದ ಕುರಿ, ಮೇಕೆಗಳಿಗೆ ತಲಾ 5 ಸಾವಿರ ರೂ.ಗಳ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ನಾವು ಕೂಡ ರೈತರ ಮಕ್ಕಳೇ. ನಮ್ಮ ಅಣ್ಣ ಕುರಿ ಸಾಕಣೆ ಮಾಡುತ್ತಿದ್ದಾರೆ. ಕುರಿ ಸಾಕಣೆ ಮಾಡುವವರೆಲ್ಲ ಕುರುಬರು ಎಂದು ಹೇಳಲಾಗುವುದಿಲ್ಲ. ನಾವು ಗೌಡರು ಆದರೂ ಕುರಿ ಸಾಕಣೆ ಮಾಡುತ್ತಿದ್ದೇವೆ. ಬೇರೆ ಜಾತಿಯವರು ಮಾಡುತ್ತಾರೆ ಎಂದು ಹೇಳಿದರು.  ಓದಿದ ಯುವಜನವರು ಕುರಿ ಸಾಕಾಣೆಯನ್ನು ಕೃಷಿಯಂತೆ ಪ್ರೀತಿಯಿಂದ ತೊಡಗಿಕೊಳ್ಳುತ್ತಾರೆ. ಇದರಿಂದ ಹೆಚ್ಚಿನ ಲಾಭವಿದೆ. ಯುವಜನರು ಇದರ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕುರಿ ಉಣ್ಣೆ ಉತ್ಪಾದಕರು ಈ ವೇಳೆ ಅನುದಾನ ಕೇಳಿದ್ದಕ್ಕೆ ಈಗ ಬಜೆಟ್ ಸೆಷನ್ ಇರುವುದರಿಂದ ಏನನ್ನೂ ಹೇಳುವುದಕ್ಕೆ ಆಗುವುದಿಲ್ಲ. ನಿಮಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದಷ್ಟೇ ಸಚಿವರು ಭರವಸೆ ನೀಡಿದರು.

Facebook Comments

Sri Raghav

Admin