ಜಿಯಾ ಖಾನ್ ಆತ್ಮಹತ್ಯೆ : ನಟ ಸೂರಜ ಪಾಂಚೋಲಿ ವಿರುದ್ಧ ಚಾರ್ಜ್‍ಶೀಟ್

ಈ ಸುದ್ದಿಯನ್ನು ಶೇರ್ ಮಾಡಿ

Suraj-Pancholi-02

ಮುಂಬೈ, ಜ.31-ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದ ಆರೋಪಕ್ಕೆ ಗುರಿಯಾಗಿರುವ ನಟ ಸೂರಜ್ ಪಾಂಚೋಲಿ(ಹಿರಿಯ ನಟ ಆದಿತ್ಯ ಪಾಂಚೋಲಿ ಮತ್ತು ನಟಿ ಜರೀನಾ ವಹಾಬ್ ಪುತ್ರ) ವಿರುದ್ಧ ಮುಂಬೈ ಸೆಷನ್ಸ್ ಕೋರ್ಟ್ ಚಾರ್ಜ್‍ಶೀಟ್ (ದೋಷಾರೋಪ) ಹೊರಡಿಸಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 306ರ ಅಡಿ 27 ವರ್ಷದ ನಟನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ದುಷ್ಪ್ರೇರಣೆ ಆರೋಪ ಹೊರಿಸಲಾಗಿದೆ.

ತಾನು ನಿರ್ದೋಷಿ, ನಟಿಯ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಸೂರಜ್ ಪಾಂಚೋಲಿ ವಾದಿಸಿದ್ದು, ಫೆ.14ರಂದು ಸಾಕ್ಷಿಗಳ ವಿಚಾರಣೆ ನಡೆಯಲಿದೆ. ಜಿಯಾಖಾನ್ 3ನೇ ಜೂನ್, 2013ರಂದು ಮುಂಬೈನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದಕ್ಕೂ ಎರಡು ದಿನಗಳ ಹಿಂದೆ ಸೂರಜ್ ಪಾಂಚೋಲಿ ಮನೆಯಲ್ಲಿ ನಟಿ ಇದ್ದಳು. ಮರುದಿನ ಬೆಳಗ್ಗೆ ತನ್ನ ಮನೆಯಲ್ಲಿ ಸಾವಿಗೆ ಶರಣಾಗಿದ್ದಳು.

ವಿಚಾರಣೆ ಸಂದರ್ಭದಲ್ಲಿ ಸೂರಜ್ ಕೆಲವು ಮಾಹಿತಿಗಳನ್ನು ಮರೆಮಾಚುತ್ತಿದ್ದಾರೆ. ಅವರನ್ನು ಸತ್ಯಶೋಧ ಪರೀಕ್ಷೆಗೆ(ಲೈ ಡಿಟೆಕ್ಟರ್ ಟೆಸ್ಟ್ ಅಥವಾ ಸುಳ್ಳು ಪತ್ತೆ ಪರೀಕ್ಷೆ) ಒಳಪಡಿಸಬೇಕೆಂದು ಕೇಂದ್ರೀಯ ತನಿಖಾ ದಳ-ಸಿಬಿಐ ಒತ್ತಾಯಿಸಿತ್ತು. ಆದರೆ ಇದನ್ನು ನಟ ನಿರಾಕರಿಸಿದ್ದರು. ಜಿಯಾ ಖಾನ್, ಅಮಿತಾಭ್ ಬಚ್ಚನ್ ಅಭಿನಯದ ನಿಶ್ಯಬ್ದ ಸಿನಿಮಾದಲ್ಲಿ ಮನೋಜ್ಞ ನಟನೆಯಿಂದ ಜನಪ್ರಿಯರಾಗಿದ್ದರು.

Facebook Comments

Sri Raghav

Admin