ತಮಿಳುನಾಡಿನ ನಿಯೋಗ ಬಂದರೆ ಆತಿಥ್ಯ ಕೊಡ್ತೀವಿ, ಕಾವೇರಿ ನೀರು ಕೊಡಲ್ಲ : ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

MB-Patil-01

ಬೆಂಗಳೂರು, ಜ.31- ಕಾವೇರಿ ನದಿ ಪಾತ್ರದಲ್ಲಿರುವ ನೀರು ನಮಗೇ ಸಾಲದೇ ಇರುವುದರಿಂದ ಅದರಲ್ಲಿ ತಮಿಳುನಾಡಿಗೆ ಹಂಚಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿಂದ ನಿಯೋಗ ಬಂದರೆ ಅವರಿಗೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದಾಗಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮಿಳುನಾಡಿನ ಬೆಳಗಳಿಗೆ ಕಾವೇರಿ ನೀರು ಬಿಡಬೇಕೆಂದು ಅಲ್ಲಿನ ಮುಖ್ಯಮಂತ್ರಿ ನೇತೃತ್ವದ ನಿಯೋಗವೊಂದು ಕರ್ನಾಟಕದ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಇಚ್ಚಿಸಿರುವುದು ಮಾಧ್ಯಮದ ಮೂಲಕ ತಿಳಿದು ಬಂದಿದೆ. ನಮಗೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ತಮಿಳುನಾಡಿನ ನಿಯೋಗ ಬಂದರೆ ಅವರನ್ನು ಆತ್ಮೀಯವಾಗಿ ಆಹ್ವಾನಿಸಲಾಗುವುದು. ಆತಿಥ್ಯ ಏರ್ಪಡಿಸಲಾಗುವುದು. ಆದರೆ, ಅವರಿಗೆ ನೀಡು ಬಿಡುವುದು ಅಸಾಧ್ಯ ಎಂದರು.

ರಾಜ್ಯದಲ್ಲಿ ಮಳೆಗಾಲ ಮುಗಿದಿದೆ. ಈಗ ಇರುವ ನೀರು ನಮ್ಮ ಬೆಳೆಗಳಿಗೆ, ಕುಡಿಯುವ ನೀರಿಗೆ ಮತ್ತು ಜಾನುವಾರುಗಳಿಗೆ ಸಾಲುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿನಲ್ಲಿನ ಬೆಳೆಗಳಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ನಿಯೋಗ ಬಂದಾಗ ನಾಲ್ಕು ಜಲಾಶಯಗಳಲ್ಲಿನ ನೀರಿನ ವಾಸ್ತವ ಸ್ಥಿತಿಗತಿಗಳನ್ನು ಮುಂದಿಟ್ಟು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು. ಮಹದಾಯಿ ವಿಷಯದಲ್ಲಿ ಗೋವಾ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್ ಅವರು ಅಲ್ಲಿನ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆವರಿಗೆ ಪತ್ರ ಬರೆದು ವಿವಾದವನ್ನು ರಾಜಕೀಯಗೊಳಿಸಲು ಯತ್ನಿಸಿದರು. ಅದರ ಪರಿಣಾಮವಾಗಿ ಅಲ್ಲಿನ ಸಂಘಟನೆಗಳಿಂದ ಅವರು ಪ್ರತಿರೋಧ ಎದುರಿಸಬೇಕಾಗಿದೆ.

ಸಾಂವಿಧಾನಕವಾಗಿ ನಡೆದುಕೊಂಡು ರಾಜಕೀಯೇತರ ನಡೆ ಅನುಸರಿಸಿದ್ದರೆ ವಿವಾದ ಸೃಷ್ಟಿಯಾಗುತ್ತಿರಲಿಲ್ಲ. ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ವಿವಾದವನ್ನು ರಾಜಕಾರಣಗೊಳಿಸಿ ಗೋಜಲು ಮಾಡಿದ್ದು ಮನೋಹರ್ ಪಾರಿಕ್ಕರ್ ಅವರು ಎಂದರು.  ಗೋವಾ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಮಾದರಿಯಲ್ಲಿ ಕರ್ನಾಟಕದಲ್ಲಿ ಚರ್ಚೆ ನಡೆಸುವ ಅಗತ್ಯ ಇಲ್ಲ ಎಂದು ಪಾಟೀಲ್ ಸ್ಪಷ್ಟಪಡಿಸಿದರು.

Facebook Comments

Sri Raghav

Admin