ಫೆ.4ರಂದು ಭೂಮಿಯ ಸಮೀಪದಲ್ಲಿಯೇ ಹಾದುಹೋಗಲಿದೆ ಅಪಾಯಕಾರಿ ಕ್ಷುದ್ರಗ್ರಹ..!

ಈ ಸುದ್ದಿಯನ್ನು ಶೇರ್ ಮಾಡಿ

Asteroid-02
ವಾಷಿಂಗ್ಟನ್, ಜ.31-ಅಪಾಯಕಾರಿ ಕ್ಷುದ್ರಗ್ರಹವೊಂದು ಫೆ.4 ಭಾನುವಾರದಂದು ಭೂಮಿಗೆ ತೀರಾ ಸನಿಹದಲ್ಲಿ ಹಾದು ಹೋಗಲಿದೆ. ಆದರೆ ಈ ಆಕಾಶಕಾಯವು ವಸುಂಧರೆಗೆ ಅಪ್ಪಳಿಸುವ ಸಾಧ್ಯತೆ ಇಲ್ಲ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾದ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಇಳೆ ಬಳಿ ಹಾದು ಹೋಗುವ ಕ್ಷುದ್ರಗ್ರಹದ ಹೆಸರು 2002 ಎಜೆ-129. ಈ ವರ್ಷ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗುವ ಆಕಾಶಕಾಯಗಳಲ್ಲಿ ಇದು ಅತ್ಯಂತ ದೊಡ್ಡದು. ಇದು 1.1 ಕಿ.ಮೀ.ಗಷ್ಟು ಉದ್ದವಿದೆ.
ಈ ಕ್ಷುದ್ರಗ್ರಹವು ಭೂಮಿಯಿಂದ 4,208,641 ಕಿ.ಮೀ. ಅಂತರದಲ್ಲಿ ಹಾದು ಹೋಗಲಿದೆ. ಇದು ಖಗೋಳ ಲೆಕ್ಕಾಚಾರದ ಪ್ರಕಾರ ಅತ್ಯಂತ ಕಡಿಮೆ ಅಂತರವಾಗಿದೆ. ಇವು ಧರಣಿಗೆ ಅಪ್ಪಳಿಸುವ ಸಾಧ್ಯತೆ ಇಲ್ಲ. ಇದು ಒಂದು ವೇಳೆ ಭೂಮಿಗೆ ಬಡಿದಿದ್ದೇ ಆದರೆ ಸಣ್ಣ ಪ್ರಮಾಣದ ಹಿಮ ಯುಗವನ್ನು ಸೃಷ್ಟಿಸುತ್ತದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

Facebook Comments

Sri Raghav

Admin