ಕ್ಷುಲಕ್ಕ ಕಾರಣಕ್ಕೆ ರಾಡ್‍ನಿಂದ ಹೊಡೆದು ತಂದೆಯನ್ನು ಕೊಂದ ಪಾಪಿ ಮಗ

ಈ ಸುದ್ದಿಯನ್ನು ಶೇರ್ ಮಾಡಿ

Son-Murder--01

ಬೆಳಗಾವಿ, ಫೆ.2- ಮಗನೇ ತಂದೆಯನ್ನು ರಾಡ್‍ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಂಜನೇಯನಗರದ ನಿವಾಸಿ ಉಮಾಕಾಂತ್ ದಂಡಾವತಿಮಠ(70) ಕೊಲೆಯಾದ ತಂದೆ. ತಂದೆ ಉಮಾಕಾಂತ್ ವೈದ್ಯರಾಗಿದ್ದು, ಬೈಲಹೊಂಗಲದ ಆಸ್ಪತ್ರೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಎಂದಿನಂತೆ ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಈ ವೇಳೆ ಮಗ ರವಿ ಜತೆ ಕ್ಷುಲಕ್ಕ ಕಾರಣಕ್ಕೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಮಗ ರಾಡ್‍ನಿಂದ ತಂದೆ ತಲೆಗೆ ಹೊಡೆದಿದ್ದಾನೆ.  ಅತಿಯಾದ ರಕ್ತಸ್ರಾವದಿಂದ ತಂದೆ ಉಮಾಕಾಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗ ಪರಾರಿಯಾಗಿದ್ದಾನೆ. ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin