ಪಕೋಡ ತಯಾರಿಸಿ ಜನಸಾಮಾನ್ಯರ ಪಕ್ಷದ ಅಹೋ ರಾತ್ರಿ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

Janasamanyara-Paksha

ಬೆಂಗಳೂರು, ಫೆ.2- ಉತ್ತರ ಕರ್ನಾಟಕ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ಕಳಸಾ ಬಂಡೂರಿ ಹೋರಾಟ ಶಾಶ್ವತವಾಗಿ ಅಂತ್ಯ ಕಾಣಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಲೇಬೇಕು ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಒತ್ತಾಯಿಸಿದ್ದಾರೆ.  ಜನಸಾಮಾನ್ಯರ ಪಕ್ಷದ ನೇತೃತ್ವದಲ್ಲಿ ಆರಂಭ ಗೊಂಡಿರುವ ಅಹೋ ರಾತ್ರಿ ಧರಣಿ ಎರಡನೆ ದಿನದಲ್ಲಿಂದು ಪಕೋಡ ತಯಾರಿಸುವ ಮೂಲಕ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಮೌನ ವಹಿಸುವುದು ತರವಲ್ಲ. ರಾಜ್ಯದ ಜನರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು.

ಮುಂಬರುವ ಫೆ.4ರಂದು ಬೆಂಗಳೂರಿಗೆ ಬರುತ್ತಿರುವ ಪ್ರಧಾನಿ ಮೋದಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಜನ ಪರವಾದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಅವರು ಎಚ್ಚರಿಸಿದರು. ಪಕ್ಷದ ಅಧ್ಯಕ್ಷರಾದ ಅಯ್ಯಪ್ಪ , ವಿಜಯ್ ಕುಲಕರ್ಣಿ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಉದ್ಯೋಗ ಸೃಷ್ಟಿ ಕುರಿತಂತೆ ಪ್ರಧಾನಿ ಯವರು ಪಕೋಡ ಮಾರಾಟ ಮಾಡುವುದು ಒಂದು ಉದ್ಯೋಗ ಎಂಬ ಹೇಳಿಕೆಯನ್ನು ಕೂಡ ಖಂಡಿಸಿದರು.

Facebook Comments

Sri Raghav

Admin