ಬಿಜೆಪಿ ಹಾಲು, ಬಿಎಸ್‍ವೈ ಜೇನು, ನಾನು ಬೆಲ್ಲ : ಯತ್ನಾಳ್

ಈ ಸುದ್ದಿಯನ್ನು ಶೇರ್ ಮಾಡಿ

Yatnal-02
ವಿಜಯಪುರ, ಫೆ.4-ನನ್ನ ಬಳಿ ಒಂದು ಶಕ್ತಿ ಇದೆ. ಅದನ್ನು ಬಿಜೆಪಿ ಉಪಯೋಗಿಸಿಕೊಳ್ಳಲಿ ಎಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕೇಂದ್ರ ಮಾಜಿ ಸಚಿವ ಬಸವರಾಜ್‍ಪಾಟೀಲ್ ಯತ್ನಾಳ್ ಇಂದಿಲ್ಲಿ ಹೇಳಿದ್ದಾರೆ.ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವ ಕುರಿತಂತೆ ಸುಳಿವು ನೀಡಿರುವ ಅವರು, ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಟ್ಟ ದಿನಗಳು ಕಳೆದು ಹೋಗಿವೆ. ಮುಂದೆ ಒಳ್ಳೆಯ ದಿನಗಳು ಬರಲಿವೆ. ಅಧಿಕಾರ ನಮ್ಮ ಸಿಗಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ನಾಯಕರ ಜತೆ ಈಗಾಗಲೇ ಮಾತುಕತೆ ನಡೆಸಿದ್ದು, ಅವರ ಮುಂದಾಳತ್ವದಲ್ಲೇ ಮಾತೃಪಕ್ಷಕ್ಕೆ ಮರಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೂರ್ಯ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಬಂದಿದ್ದಾನೆ. ಈಗ ನನಗೂ ಬದಲಾವಣೆ ಕಾಲ ಬಂದಿದೆ. ಬಿಜೆಪಿ ಹಾಲು, ಯಡಿಯೂರಪ್ಪ ಜೇನು, ನಾನ ಬೆಲ್ಲ ಇದ್ದಂತೆ ಎಂದು ತಿಳಿಸಿದ್ದಾರೆ. ನನ್ನ ಸಾರ್ವತ್ರಿಕ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಬಿಜೆಪಿ ಸೇರುವಂತೆ ಹಲವರು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ. ಯಾರೋ ಕೆಲವರು ನನ್ನ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಎಲ್ಲವೂ ಬಗೆಹರಿಯಲಿದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin