ಕೇಂದ್ರ ಸರ್ಕಾರ 150 ಬಸ್‍ಗಳಿಗೆ ಅನುದಾನ ನೀಡಿದರೆ ಶೇ.50ರಷ್ಟು ಬಸ್ ದರನ್ನು ಕಡಿತ : ಬಿಎಂಟಿಸಿ ಅಧ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

bmtc-1

ಬೆಂಗಳೂರು,ಫೆ.5- ಕೇಂದ್ರ ಸರ್ಕಾರ 150 ಬಸ್‍ಗಳಿಗೆ ಅನುದಾನ ನೀಡಿದರೆ ಶೇ.50ರಷ್ಟು ಬಸ್ ದರನ್ನು ಕಡಿಮೆ ಮಾಡುವುದಾಗಿ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ತಿಳಿಸಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶಾಂತಿನಗರ ಘಟಕ 3ನೇ ಡಿಪೋದಲ್ಲಿ ಇಂದು ಬಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಬಸ್‍ಗಳ ಸ್ವಚ್ಛತಾ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ಅವರು ಬೆಂಗಳೂರನ್ನು ಸ್ಮಾರ್ಟ್ ಸಿಟಿ ಎಂದು ಕರೆದಿದ್ದಾರೆ. ಆದರೆ ಕೇವಲ 40 ಬಸ್‍ಗಳಿಗೆ ಮಾತ್ರ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. 150ಕ್ಕೆ ಅನುದಾನ ನೀಡಿದ್ದೆ ಆದರೆ ಬಸ್ ದರವನ್ನು ಕಡಿಮೆ ಮಾಡುತ್ತೇವೆ ಎಂದು ತಿಳಿಸಿದರು.

ಯಾವ ಬಸ್ ಅಸ್ವಚ್ಛತೆಯಿಂದ ಕೂಡಿರುತ್ತದೋ ಆ ಬಸ್ ನಿರ್ವಹಿಸುವವರನ್ನು ವಜಾಗೊಳಿಸುವುದಾಗಿ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.  6,500 ಬಸ್‍ಗಳ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಘಟಕ, ಕಚೇರಿ ಹಾಗೂ ಬಸ್‍ಗಳ ಸ್ವಚ್ಛತೆ ಮಾಡುವ ಮೂಲಕ ಅಭಿಯಾನವನ್ನು ಕೈಗೊಂಡಿದ್ದೇವೆ. ತಾಂತ್ರಿಕವಾಗಿ ಹಾಗೂ ಮಾನಸಿಕವಾಗಿ ಪ್ರಯಾಣಿಕರಿಗೆ ಯಾವುದೇ ಕಿರಿಕಿರಿಯಾಗದಂತೆ ಸ್ವಚ್ಛತೆ ದೃಷ್ಟಿಯಿಂದ ಈ ಅಭಿಯಾನ ಕೈಗೊಂಡಿರುವುದಾಗಿ ತಿಳಿಸಿದರು.

ನಗರದ ಜನತೆಗೆ ಸಮಯಕ್ಕೆ ಸರಿಯಾಗಿ ಸೇವೆ ಒದಗಿಸಲು ಮುಂದಾಗುತ್ತೇವೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ ವಾಹನ ದಟ್ಟಣೆ ಕಡಿಮೆ ಮಾಡುವುದು ಮತ್ತು ಪರಿಸರ ರಕ್ಷಣೆ ಹಿನ್ನೆಲೆಯಲ್ಲಿ ಬಸ್ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು. ಮನಸ್ಸು ಮತ್ತು ಹಸ್ತ ಶುದ್ದವಾಗಿರಬೇಕು. ಆಗ ಮಾತ್ರ ಸ್ವಚ್ಚತೆ ಕಾಪಾಡಲು ಸಾಧ್ಯ. ಇಂದು ಎಲ್ಲಾ ಸಾರಿಗೆಯ ಅಧಿಕಾರಿಗಳು ಬಸ್‍ನಲ್ಲಿಯೇ ಪ್ರಯಾಣಿಸುವುದರ ಮೂಲಕ ಪ್ರಯಾಣಿಕರಿಗೆ ಸಾರಿಗೆಯಿಂದ ಆಗುವ ಲಾಭವನ್ನು ಸಾರ್ವಜನಿಕರಿಗೆ ಮನಪರಿವರ್ತನೆ ಮಾಡಲಾಗುವುದು ಎಂದರು.

ರಾಜ್ಯದ 6.500 ಸಾವಿರ ವಾಹನಗಳನ್ನು ಹೊಂದಿದೆ. 4ಲಕ್ಷ ದ್ವಿಚಕ್ರ ವಾಹನವಿದೆ. ಇವುಗಳನ್ನು ದಿನ ಕಳೆದಂತೆ ಕಡಿಮೆಗೊಳಿಸುವ ಉದ್ದೇಶ ಹೊಂದಿದ್ದೇವೆ. ಶೇ.37ರಷ್ಟು ವಜ್ರ ಬಸ್‍ಗಳ ದರವನ್ನು ಕಡಿಮೆಗೊಳಿಸಿ ಮಧ್ಯಮ ವರ್ಗದವರು ಸಹ ಎಸಿ ಬಸ್‍ನಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದ್ದೇವೆ. ಅಲ್ಲದೆ ಏರ್‍ಪೋರ್ಟ್ ರಸ್ತೆಗೆ ತೆರಳುವ ಬಸ್‍ಗಳ ದರವನ್ನು ಸಹ ಕಡಿಮೆಗೊಳಿಸಿದ್ದೇವೆ ಎಂದರು. ಸಾಮಾನ್ಯ ಬಸ್‍ನ ದರವನ್ನು ಕಡಿಮೆಗೊಳಿಸಲು ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಡಿಪೋ ಮ್ಯಾನೇಜರ್ ಪ್ರಕಾಶ್, ಬಿ.ಎಸ್.ಜಗದೀಶ್ ಕುಮಾರ್, ಪಿಟಿಎಂ ವಿಶ್ವನಾಥ್ ಸೇರಿದಂತೆ ಮತ್ತಿತರರು ಇದ್ದರು.

Facebook Comments

Sri Raghav

Admin