ಮಿಲನ ಮಹೋತ್ಸವಕ್ಕೆ ಇವುಗಳನ್ನು ಸೇವಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Life-Styl

ಸತಿ-ಪತಿ ನಡುವೆ ಸುಮಧುರ ಬಾಂಧವ್ಯ ಹೆಚ್ಚಾಗಲು ಮತ್ತು ಮಿಲನ ಮಹೋತ್ಸವದ ರಸ ನಿಮಿಷಗಳನ್ನು ಆನಂದಮಯವಾಗಿ ಅನುಭವಿಸಲು ನಮ್ಮ ದೇಹದಲ್ಲಿರುವ ಡೊಪಾಮೈನ್ ಎಂಬ ಹಾರ್ಮೋನ್ ಕಾರಣವಾಗಿದೆ. ಪ್ರೇಮಿಗಳು ಪರಸ್ಪರ ಭೇಟಿಯಾದಾಗ ಖುಷಿಯಾಗಲು ಕಾರಣ ಈ ಹಾರ್ಮೋನ್‍ನ ಉತ್ಪತ್ತಿ. ವಿಟಮಿನ್ ಬಿ6 ಮತ್ತು ಮೆಗ್ನೀಷಿಯಂ ಇರುವ ಆಹಾರಗಳನ್ನು ಸೇವಿಸುವುದರಿಂದ ಈ ಡೊಪಾಮೈನ್ ಹೆಚ್ಚಾಗಿ ಗಂಡ-ಹೆಂಡತಿ ನಡುವೆ ಬಾಂಧವ್ಯದ ಬೆಸುಗೆ ಮತ್ತಷ್ಟು ಹೆಚ್ಚಾಗುತ್ತದೆ. ದಂಪತಿಗಳಲ್ಲಿ ಪರಸ್ಪರ ಪ್ರೀತಿ-ಆಕರ್ಷಣೆ ಹೆಚ್ಚಿಸುವ ಆಹಾರಗಳ ಟಿಪ್ಸ್ ಇಲ್ಲಿದೆ.

ಸ್ಟ್ರಾಬೆರಿ: ರಾತ್ರಿ ಮಲಗುವ ಮುನ್ನ ಅಂದರೆ ಸತಿ-ಪತಿ ಮಿಲನ ಕ್ರಿಯೆ ನಡೆಸುವುದಕ್ಕೂ ಮುನ್ನ ಸ್ಟ್ರಾಬೆರಿ ಸೇವಿಸುವುದು ಒಳ್ಳೆಯದು. ಇದು ಲವ್ ಹಾರ್ಮೋನ್ ಹೆಚ್ಚುಸುತ್ತದೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮಥ್ರ್ಯ ಹೊಂದಿದೆ.

ಕ್ಯಾರೆಟ್: ಕ್ಯಾರೆಟ್ ಸೇವಿಸಿದರೆ ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ. ಕ್ಯಾರೆಟ್‍ನಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿಗೆ ತುಂಬಾ ಒಳ್ಳೆಯದು.

ಪೈನಾಪಲ್: ಅನಾನಸ್ ಅಥವಾ ಪೈನಾಪಲ್‍ನಲ್ಲಿ ಸಿಟ್ರಸ್ ಇರುವುದರಿಂದ ಚಳಿಗಾಲದಲ್ಲಿ ಇದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇದನ್ನು ಪುರುಷರು ಸೇವಿಸಿದರೆ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ.

ಬಾದಾಮಿ: ಬಾದಾಮಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು, ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ಸೇವಿಸಿದಾಗ ರೊಮ್ಯಾಂಟಿಕ್ ಮೂಡ್ ಹೆಚ್ಚಾಗುತ್ತದೆ.

Facebook Comments

Sri Raghav

Admin