ಮಹಿಳೆಯ ಕೈ ಕಾಲು ಕಟ್ಟಿ ಸಜೀವ ದಹನ, ಒಂದು ಲಕ್ಷ ರೂ ದೋಚಿ ಪರಾರಿಯಾದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Dead-Body-Women

ಬಾಗಲಕೋಟೆ, ಫೆ.6- ಹಾಡ ಹಗಲೇ ದುಷ್ಕರ್ಮಿಗಳು ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ಸಜೀವ ದಹನ ಮಾಡಿ ಮನೆಯಲ್ಲಿದ್ದ ಒಂದು ಲಕ್ಷ ರೂ.ನ್ನು ದೋಚಿ ಪರಾರಿಯಾಗಿರುವ ಘಟನೆ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನವನಗರ ವಾಂಬೆ ಕಾಲೋನಿ ನಿವಾಸಿ ರೂಪ ಹಳ್ಳದ ಮನಿ (28) ಸಜೀವ ದಹನಗೊಂಡ ಮಹಿಳೆ. ಕಳೆದ ನಾಲ್ಕು ದಿನಗಳ ಹಿಂದೆ ರೂಪ ಪತಿ ಒಂದು ಲಕ್ಷ ಹಣವನ್ನು ಮನೆಯಲ್ಲಿ ತಂದಿಟ್ಟಿದ್ದರು. ಇದನ್ನು ಅರಿತ ದುಷ್ಕರ್ಮಿಗಳು ರೂಪಾ ಮನೆಯಲ್ಲಿ ಒಬ್ಬಳೇ ಇರುವುದನ್ನು ಮನಗಂಡು ಮನೆ ನುಗ್ಗಿದ್ದಾರೆ. ರೂಪಾಳ ಕೈ ಕಾಲು ಕಟ್ಟಿ ಹಾಕಿ ಬೆಂಕಿ ಹಚ್ಚಿ ಮನೆಯಲ್ಲಿದ್ದ ಒಂದು ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ರೂಪ ಅವರ ಕಿರಿಚಾಟ ಕೇಳಿ ಅಕ್ಕ ಪಕ್ಕದ ಮನೆಯವರು ಬರುವಷ್ಟರಲ್ಲಿ ಸಜೀವ ದಹನವಾಗಿದ್ದಾರೆ. ಈ ಸುದ್ದಿ ತಿಳಿದ ನಗರದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin