ಹೋಮ್ ಸ್ಟೇಗಳಲ್ಲಿ ಮದ್ಯ ಸರಬರಾಜು ಮಾಡಿದರೆ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

Timmapur--01
ಬೆಂಗಳೂರು, ಫೆ.6- ಹೋಮ್ ಸ್ಟೇಗಳಲ್ಲಿ ಮದ್ಯ ಸರಬರಾಜು ಮಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ದಂಡ ವಿಧಿಸುವುದಾಗಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿಧಾನಸಭೆಗೆ ತಿಳಿಸಿದ್ದಾರೆ. ಜೆಡಿಎಸ್‍ನ ಶಾಸಕ ಶಿವಲಿಂಗೇಗೌಡ ಅವರು ವಿಶ್ರಾಂತಿಗೆಂದು ಹೋಮ್‍ಸ್ಟೇಗೆ ಹೋಗುವವರಿಗೆ ಕುಡುಕರ ಹಾವಳಿಯಿಂದ ಕಿರಿಕಿರಿಯಾಗಿದೆ. ಅಲ್ಲಿ ಮದ್ಯ ಸರಬರಾಜನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಹೋಮ್ ಸ್ಟೇಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶವಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೋಮ್‍ಸ್ಟೇಯಲ್ಲಿ ಮದ್ಯ ಸರಬರಾಜು ಮಾಡಿದ್ದಕ್ಕಾಗಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದ್ದು, 5 ಸಾವಿರ ದಂಡ ವಿಧಿಸಲಾಗಿದೆ. ದಂಡದ ಪ್ರಮಾಣ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಇದನ್ನು ಬಳಸಿಕೊಂಡು ಹೆಚ್ಚು ದಂಡ ವಿಧಿಸುವುದಾಗಿ ಹೇಳಿದರು.

Facebook Comments

Sri Raghav

Admin