ಜಾತಿವಾರು ಸಮಾವೇಶಕ್ಕೆ ಬಿಜೆಪಿ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

BJP--01

ಬೆಂಗಳೂರು,ಫೆ.7- ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯವರು ಜಾತಿ ಸಮಾವೇಶ ಸೇರಿದಂತೆ ವಿವಿಧ ಸಮಾವೇಶಗಳನ್ನು ಮಾಡಲು ಯೋಚಿಸಿದ್ದಾರೆ. ಚುನಾವಣೆವರೆಗೂ ಮುನ್ನ ಜಾತಿ ಸಮಾವೇಶ ಮಾಡಲು ಬಿಜೆಪಿ ನಿರ್ಧರಿಸಿದ್ದು, ಜಾತಿ ಸಮಾವೇಶ ನಡೆಸುವ ಸಂಬಂಧ ಬಿಜೆಪಿ ಈಗಾಗಲೇ ಸಮಿತಿಯನ್ನೂ ಸಹ ರಚಿಸಿದೆ ಎಂದು ತಿಳಿದುಬಂದಿದೆ.

ಕಳೆದ ಭಾನುವಾರ ಪರಿವರ್ತನಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯ ನಾಯಕರಿಗೆ ಶಹಬ್ಬಾಸ್‍ಗಿರಿ ನೀಡುವುದರ ಜತೆಗೆ ಮುಂದಿನ ಕೆಲಸ ನೋಡಿ ಎಂಬ ಸೂಚನೆ ಕೊಟ್ಟು ಹೋಗಿದ್ದಾರೆ ಎನ್ನಲಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶ ನಡೆಸಿದ್ದು ಉತ್ತಮವಾದರೂ ಅದರ ಸಂಪೂರ್ಣ ಲಾಭ ಪಡೆಯಬೇಕು.ಕಾರ್ಯಕರ್ತರಲ್ಲಿ ಮೂಡಿರುವ ಆತ್ಮವಿಶ್ವಾಸ ಕಡಿಮೆಯಾಗುವ ಮೊದಲೇ ಫಾಲೋಅಪ್ ಮಾಡಬೇಕುಎಂದುಯಡಿಯೂರಪ್ಪಗೆ ಪ್ರಧಾನಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪ್ರಮುಖರ ಸಭೆ ಸೇರಿ ಸಮಾವೇಶಗಳನ್ನು ನಡೆಸುವ ನಿರ್ಧಾರಕ್ಕೆ ವೇಗ ನೀಡಲು ಬಿಜೆಪಿ ತೀರ್ಮಾನಿಸಿದೆ.

ಕೃಷಿ ಕ್ಷೇತ್ರಕ್ಕೆ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಅಸಹಕಾರವನ್ನು ತಿಳಿಸಿದ್ದಾರೆ. ಈ ಅಂಶಗಳನ್ನು ಮುಂದಿಟ್ಟುಕೊಂಡು ಗ್ರಾಮ ಸಮಾವೇಶಗಳನ್ನು ಸಂಘಟಿಸಬೇಕು. ರೈತ ಸಮಾವೇಶಗಳು ಯಶಸ್ವಿಯಾದರೆ ಚುನಾವಣೆಯಲ್ಲಿ ಅರ್ಧಗೆದ್ದಂತೆ. ಇದನ್ನು ಎಲ್ಲ ನಾಯಕರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಸಭೆಯಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ತುರ್ತು ಪ್ರಮುಖರ ಸಭೆ ನಡೆಸಿದ ರಾಜ್ಯ ನಾಯಕರು, ಸಮಾವೇಶಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಒಬಿಸಿ ಮೋರ್ಚಾ ಮೂಲಕ 8 ಸಮುದಾಯಗಳ ತಲಾಒಂದು ರಾಜ್ಯಮಟ್ಟದ ಸಮಾವೇಶ ನಡೆಸಬೇಕು. ಎಸ್ಸಿ ಹಾಗೂ ಮಹಿಳೆಯರ ತಲಾ 4, ಎಸ್ಟಿ ಮತ್ತು ರೈತರ ತಲಾ ಒಂದು ಸೇರಿ 35 ಸಮಾವೇಶಗಳು ನಡೆಯಲಿವೆ. ಸಮಾವೇಶ ನಡೆಯುವ ಊರುಗಳ ಹೆಸರು ಅಂತಿಮವಾಗಿದೆ. ಸ್ಥಳ ಹಾಗೂ ದಿನಾಂಕವನ್ನು ಅಂತಿಮಗೊಳಿಸುವ ಕೆಲಸ ನಾಲ್ಕೈದು ದಿನಗಳಲ್ಲಿ ನಡೆಯಬೇಕು ಎಂದು ಪ್ರಮುಖರ ಸಭೆಯಲ್ಲಿ ನಿರ್ಧಾರವಾಗಿದೆ ಎಂದು ಮೂಲಗಳು ಹೇಳಿವೆ.
ಫೆ.10 ರಂದು ರಾಯಚೂರಿನಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ, ಫೆ.18ರಂದು ಬೆಳಗಾವಿಯಲ್ಲಿ ಕ್ಷತ್ರಿಯ ಸಮಾವೇಶ ನಡೆಸುತ್ತಿದ್ದು, ಇದು ಮರಾಠಿ ಮತಗಳನ್ನು ಸೆಳೆಯಲು ನಡೆಸುತ್ತಿರುವ ಸಮಾವೇಶವಾಗಿದೆ. ಮಾ.3ರಂದು ಉಡುಪಿಯಲ್ಲಿ ಮೀನಗಾರರ ಬೃಹತ್ ಸಮಾವೇಶ ನಡೆಯಲಿದೆ. ಮಾ.4ರಂದು ನೇಕಾರರ ಸಮಾವೇಶ. ಅಂದೇ ಮುಳಬಾಗಿಲಿನಲ್ಲಿ ಬಲಿಜ ಸಮಾವೇಶ, ಮಾ.13 ರಂದು ತುಮಕೂರು, ರಿನಲ್ಲಿಯಾದವ ಸಮಾವೇಶ ಜರುಗಲಿದೆ. ಫೆಬ್ರವರಿ 11, 17, 20, 25 ಮತ್ತು ಮಾ.10 ಮತ್ತು 11 ರಂದು ಕಲಬುರ್ಗಿ, ಹಾವೇರಿ, ಮೈಸೂರು, ಕೋಲಾರ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮತಗಳನ್ನು ಸೆಳೆಯಲು ಬೃಹತ್ ಸಮಾವೇಶ ನಡೆಯಲಿದೆ.

ಪ್ರತ್ಯೇಕವಾಗಿ ಮಹಿಳಾ ಮತಗಳತ್ತಲೂ ಬಿಜೆಪಿ ತನ್ನಚಿತ್ತ ಹರಿಸಿದೆ.ನಾಲ್ಕು ಕಡೆ ಬೃಹತ್ ಮಹಿಳಾ ಸಮಾವೇಶ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. 14 ಜಿಲ್ಲೆಗಳ ಮಹಿಳೆಯರನ್ನು ನಾಲ್ಕು ಕಡೆಗಳಲ್ಲಿ ಒಟ್ಟುಗೂಡಿಸಿ ಸಮಾವೇಶ ನಡೆಸಲಿದ್ದಾರೆ. ಮಾ.6ರಂದು ಶಿವಮೊಗ್ಗದಲ್ಲಿ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡ ಮಹಿಳಾ ಸಮಾವೇಶ, ಮಾ.16 ರಂದು ಕಲಬುರ್ಗಿಯಲ್ಲಿ ಬೀದರ್,ಯಾದಗಿರಿ, ಮಾ.18ರಂದು ಮೈಸೂರಿನಲ್ಲಿ ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳನ್ನೊಳಗೊಂಡ ಮಹಿಳಾ ಸಮಾವೇಶ, ರಾಯಚೂರು ಜಿಲ್ಲೆಯಲ್ಲೂ ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಸಮಾವೇಶ ಇದ್ದು, ದಿನಾಂಕ ನಿಗದಿಯಾಗಬೇಕಾಗಿದೆ.

ದಾವಣಗೆರೆ , ಬೆಂಗಳೂರಿನಲ್ಲಿ ರೈತ ಸಮಾವೇಶ ಮತ್ತು ಸ್ಲಂ ಸಮಾವೇಶ ನಡೆಸಲೂ ನಿರ್ಧರಿಸಲಾಗಿದೆ. ಜಾತಿ ಮತಗಳು, ಪರಿಶಿಷ್ಟರ ಮತಗಳು, ರೈತರಮತಗಳು, ಮಹಿಳೆಯರ ಮತಗಳು, ಸ್ಲಂ ನಿವಾಸಿ ಮತಗಳನ್ನು ಸೆಳೆಯಲು ಬಿಜೆಪಿ ತಯಾರಿ ನಡೆಸಿದ್ದು , ಪ್ರತಿ ಸಮಾವೇಶವನ್ನು ಅದ್ಧೂರಿಯಾಗಿ ಮತ್ತು ಯಶಸ್ವಿಯಾಗಿ ನಡೆಸಲು ತಯಾರಿ ನಡೆಸಲಾಗುತ್ತಿದೆ. ಜಾತಿ ಸಮಾವೇಶಗಳಿಗೂ ಕೇಂದ್ರದ ನಾಯಕರು ಮತ್ತುಆಯಾಜಾತಿಗೆ ಸೇರಿದರಾಷ್ಟ್ರೀಯ ನಾಯಕರುಗಳನ್ನು ಕರೆಸುವ ಬಗ್ಗೆ ತೀರ್ಮಾನಿಸಲಾಗಿದೆ.

Facebook Comments

Sri Raghav

Admin