ಜೈನರ ತ್ಯಾಗ ಬಲಿದಾನವನ್ನು ಕೊಂಡಾಡಿದ ರಾಷ್ಟ್ರಪತಿ

ಈ ಸುದ್ದಿಯನ್ನು ಶೇರ್ ಮಾಡಿ

Mahamastakaabhisheka--003

ಶ್ರವಣಬೆಳಗೊಳ, ಫೆ.7- ಸಮಾಜದಲ್ಲಿ ಬೇರೂರಿರುವ ಅಶಾಂತಿ ನಿರ್ಮೂಲನೆಗೆ ಭಗವಾನ್ ಬಾಹುಬಲಿಯ ಶಾಂತಿ, ತ್ಯಾಗ, ಆದರ್ಶಗಳೇ ಪ್ರೇರಣೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದಿಲ್ಲಿ ಪ್ರತಿಪಾದಿಸಿದರು. ಗೊಮ್ಮಟ ನಗರದ ಚಾವುಂಡರಾಯ ವೇದಿಕೆಯಲ್ಲಿ ಮಂಗಳವಾದ್ಯಗಳ ನಾದದೊಂದಿಗೆ ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಜ್ಜನ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಕಲ್ಯಾಣಕ್ಕೆ ಅಗತ್ಯವಾದ ಅನೇಕ ಆದರ್ಶ ಸಂದೇಶಗಳನ್ನು ಜೈನಧರ್ಮ ನೀಡುತ್ತಾ ಬಂದಿದೆ. ವಿಶ್ವಶಾಂತಿಗೆ ಇದು ನಾಂದಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ತಾವು ರಾಷ್ಟ್ರಪತಿಯಾದ ನಂತರ ಕರ್ನಾಟಕಕ್ಕೆ ಮೂರು ಬಾರಿ ಭೇಟಿ ನೀಡಿದ್ದೇವೆ. ಆದರೆ ಶ್ರವಣಬೆಳಗೊಳದಲ್ಲಿ ಶಿಲ್ಪಿಗಳು ಶ್ರದ್ಧಾಭಕ್ತಿಗಳಿಂದ ನಿರ್ಮಿಸಿರುವ ಬಾಹುಬಲಿಯ ಮೂರ್ತಿ ಜೀವಕಳೆಯಿಂದ ಕೂಡಿರುವುದಲ್ಲದೆ, ದೇಶ-ವಿದೇಶದವರನ್ನು ಸೆಳೆಯುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಾಹುಬಲಿಯ ಮೂರ್ತಿ ಉಜ್ಜೈನಿ, ಪಾಟ್ನಾದಲ್ಲಿಯೂ ಕಾಣಬರುತ್ತದೆ. ಆದರೆ ಶ್ರವಣಬೆಳಗೊಳದಲ್ಲಿರುವ ಈ ವಿರಾಟ್ ಮೂರ್ತಿಯ ಆಕರ್ಷಣೆಯೇ ಬೇರೆ ಎಂದು ಹೇಳಿದರು.
ಚಂದ್ರಗುಪ್ತ ಮೌರ್ಯ ಬಾಹುಬಲಿಯ ಈ ತಪೋಕ್ಷೇತ್ರಕ್ಕೆ ಬಂದು ಸಲ್ಲೇಖನ ವ್ರತ ಆಚರಿಸಿದ್ದನ್ನು ಸ್ಮರಿಸಿದ ಅವರು, ಅಹಿಂಸೆ ಪರಮ ಧರ್ಮ ಎಂಬುದನ್ನು ಇದು ಪ್ರತಿಪಾದಿಸುತ್ತದೆ. ಶಾಂತಿ, ಅಹಿಂಸೆ, ತ್ಯಾಗದ ಮೂಲಕ ವಿಶ್ವ ಕಲ್ಯಾಣಕ್ಕೆ ಮುನ್ನುಡಿ ಬರೆಯಲಾಗಿದೆ.

ಸಮಾಜ ಇಂದು ವಿಭಿನ್ನ ಸಮಸ್ಯೆಗಳಿಂದ ಬಳಲುತ್ತಿದ್ದು, ಪ್ರಸ್ತುತ ಸಂದರ್ಭದಲ್ಲಿ ವಿಶ್ವಶಾಂತಿಗೆ ಅವಶ್ಯವಿರುವ ಉತ್ತಮ ಅಂಶಗಳನ್ನು ಜೈನ ಧರ್ಮ ಪ್ರಸರಿಸುತ್ತಾ ಬಂದಿದೆ. ತ್ಯಾಗ ಜೀವಿ ಬಾಹುಬಲಿ ದರ್ಶನದಿಂದ ಶಾಂತಿ ಮಾರ್ಗದ ಸಂದೇಶ ಸಿಗುತ್ತದೆ. ಎಲ್ಲೆಡೆ ಕಾಡುತ್ತಿರುವ ದ್ವೇಷ, ಅಸೂಯೆಗೆ ಇದು ಪ್ರೇರಕ ಮಂತ್ರವಾಗಲಿದೆ ಎಂದ ಅವರು, ಜೈನ ಧರ್ಮದ ಮೂಲ ಸಂದೇಶಗಳಲ್ಲಿ ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ, ಸಮ್ಯಕ್ ಚರಿತ್ರೆ ಮಾನವ ಕುಲಕ್ಕೆ ಸ್ಫೂರ್ತಿದಾಯಕವಾಗಿವೆ ಎಂದು ನುಡಿದರು.

ಶ್ರವಣಬೆಳಗೊಳದ ಮಠ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯಪಾಲ ವಿ.ಆರ್.ವಾಲಾ ಮಾತನಾಡಿ, ಸತ್ಯ, ಅಹಿಂಸೆ, ಸ್ನೇಹ, ಬ್ರಹ್ಮಚರ್ಯ, ಪರಿತ್ಯಾಗ, ಚೈತನ್ಯ ಬಾಹುಬಲಿ ಮೂರ್ತಿಯಲ್ಲಿ ಕಾಣಬಹುದಾಗಿದ್ದು, ಈ ಮೂರ್ತಿ ದರ್ಶನದಿಂದ ಸಂಸ್ಕಾರ ಪ್ರಾಪ್ತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಸಂಸ್ಕಾರದ ಜಾಗೃತಿಯೊಂದಿ ಆಧ್ಯಾತ್ಮದೆಡೆಗೆ ಸಾಗೋಣ ಎಂದ ಅವರು, ಅಲೆಗ್ಸಾಂಡರ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ಲೆಟೋ ಅಲ್ಲಿಂದ ಬರುವಾಗ ಸಂತರನ್ನು ಕರೆದುಕೊಂಡು ಬಾ ಎಂದು ಸಲಹೆ ನೀಡಿದ್ದರಂತೆ. ಅದೇ ರೀತಿ ನಮ್ಮ ವ್ಯವಸ್ಥೆಯಲ್ಲಿ ಶಾಸನ ರಚನೆಯಲ್ಲಿ ಸಂತರ ಮಾರ್ಗದರ್ಶನವಿರಬೇಕು ಎಂದು ತಿಳಿಸಿದರು.

ಸಂಪತ್ತಿನ ಕೆಲ ಭಾಗವನ್ನು ನಾವು ದಾನವಾಗಿ ನೀಡಬೇಕು. ಇದರಿಂದ ಮಾನವ ಕಲ್ಯಾಣಕ್ಕೆ ದಾರಿಯಾಗಲಿದೆ ಎಂದು ಸಲಹೆ ಮಾಡಿದರು. ಧರ್ಮಸ್ಥ ಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಮಾತನಾಡಿ, ಬಾಹುಬಲಿಯ ಚಿನ್ನದ ಮೂರ್ತಿಯನ್ನೇನಾದರೂ ಚಾವುಂಡರಾಯ ನಿರ್ಮಿಸಿದ್ದರೆ ಯುದ್ಧವೇ ಆಗಿ ಹೋಗುತ್ತಿತ್ತು. ಆದರೆ ಶಿಲೆಯಲ್ಲಿ ಇಂತಹ ಬೃಹತ್ ಮೂರ್ತಿಯನ್ನು ನಿರ್ಮಿಸಿ

Facebook Comments

Sri Raghav

Admin