ಪಶ್ಚಿಮಘಟ್ಟದಲ್ಲಿ ದೇಶದ ಮೊದಲ ಆಗಸ ನಡಿಗೆ…!!

ಈ ಸುದ್ದಿಯನ್ನು ಶೇರ್ ಮಾಡಿ

Dandeli--01

ದಾಂಡೇಲಿ,ಫೆ.8-ನಿತ್ಯಹರಿದ್ವರ್ಣ ಕಾಡುಗಳಿಂದ ಕಂಗೊಳಿಸುವ ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ದೇಶದ ಪ್ರಪ್ರಥಮ ಆಗಸ ನಡಿಗೆ(ಕೆನೋಪಿ ವಾಕ್) ಕನಸು ಸಾಕಾರಗೊಂಡಿದೆ.  ಉತ್ತರಕರ್ನಾಟಕದ ಕ್ಯಾಸೆಲ್‍ರಾಕ್ ಬಳಿ ಕುವೇಷಿ ಪ್ರದೇಶದಲ್ಲಿ ಭೂಮಿಯಿಂದ 30 ಅಡಿಗಳಷ್ಟು ಎತ್ತರದಲ್ಲಿ ಪ್ರವಾಸಿಗರು ವಿಹರಿಸಿ ಪ್ರಕೃತಿಯ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳುವ ಸೌಲಭ್ಯ ಲಭ್ಯವಾಗಲಿದೆ.  ಕರ್ನಾಟಕ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಈ ಮಹತ್ವದ ಯೋಜನೆಯನ್ನು ಅಭಿವೃದ್ದಿಗೊಳಿಸಿದೆ. ಫೆ.10ರಂದು ಈ ಸೌಲಭ್ಯ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಕೆನೋಪಿ ವಾಕ್ ಉದ್ಘಾಟನಾ ಸಮಾರಂಭದಲ್ಲಿ ಅರಣ್ಯ ಸಚಿವ ರಮಾನಾಥ ರೈ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಕೈಗಾರಿಕೆಗಳ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು.  ದೇಶದ ಪ್ರಪ್ರಥಮ ಕೆನೋಪಿ ವಾಕ್ ಪ್ರವಾಸಿಗರಿಗೆ ರೋಚಕ ಅನುಭವ ನೀಡುವ ಜೊತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಕಾಳಿ ಹುಲಿ ಅಭಯಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಓ.ಪಾಲಯ್ಯ ವಿವರಿಸಿದ್ದಾರೆ.
ಈ ಕಾರ್ಯವು ಅಂತಿಮ ಹಂತದಲ್ಲಿದೆ. ಪ್ರವಾಸಿಗರು ವಿಹರಿಸಲು ಅಂಕಣಗಳು ಸಜ್ಜಾಗಿವೆ. ಅರಣ್ಯ ಇಲಾಖೆ ನೆರವಿನೊಂದಿಗೆ ಪ್ರವಾಸೋದ್ಯಮ ಇಲಾಖೆಯು ಈ ಯೋಜನೆಯನ್ನು ಅಭಿವೃದ್ದಿಗೊಳಿಸಿದೆ. ಉದ್ಘಾಟನಾ ಸಮಾರಂಭದ ನಂತರ ಸರ್ಕಾರವು ಕೆನೋಪಿ ವಾಕ್‍ನನ್ನು ಯಾರು ನಿರ್ವಹಿಸಬೇಕು ಎಂಬುದರ ಬಗ್ಗೆ ನಿರ್ಧರಿಸಲಿದೆ ಎಂದು ತಿಳಿಸಿದರು.

WhatsApp Image 2018-02-08 at 8.46.11 AM

ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜ್‍ಗಳು ಮತ್ತು ರೆಸಾರ್ಟ್‍ಗಳು ಈ ಕೆನೋಪಿ ವಾಕ್‍ನನ್ನು ನಿರ್ವಹಣೆ ಮಾಡುವ ನಿರೀಕ್ಷೆಯಿದೆ.
ಈ ಆಗಸ ನಡಿಗೆಯ ಅನುಭವ ಪಡೆಯಲು ಪ್ರವಾಸಿಗರು ಮತ್ತು ವೀಕ್ಷಕರಿಗೆ ಶುಲ್ಕಗಳನ್ನು ವಿಧಿಸಿ ಅದರಿಂದ ಬರುವ ಹಣವನ್ನು ಮೂಲ ಸೌಕರ್ಯಾಭಿವೃದ್ಧಿಗೆ ವಿನಿಯೋಗಿಸಲಾಗುವುದು.  ಕೆನೋಪಿ ವಾಕ್ ಯೋಜನೆಯನ್ನು ಮೂರು ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು. ಆದರೆ ಪಶ್ಚಿಮ ಘಟ್ಟದ ಪ್ರದೇಶಗಳ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಈ ಯೋಜನೆಗೆ ಅಡ್ಡಿಯಾಗಿತ್ತು.

WhatsApp Image 2018-02-08 at 8.46.10 AM

ಕೇಂದ್ರ ಸರ್ಕಾರವು ಈ ಯೋಜನೆಗೆ ಹಸಿರುನಿಶಾನೆ ತೋರಿದೆ. ತಾಂತ್ರಿಕವಾಗಿ ಕಾಳಿ ಹುಲಿ ರಕ್ಷಿತಾರಣ್ಯವು ಕ್ಯಾಸೆಲ್‍ರಾಕ್ ವನ್ಯಜೀವಿ ವಲಯವನ್ನು ನಿರ್ವಹಿಸುತ್ತಿದೆ. ಇದು ದಾಂಡೇಲಿ ವನ್ಯಧಾಮದ ಒಂದು ಭಾಗ.  ಭವಿಷ್ಯದಲ್ಲಿ 248 ಚ.ಕಿ.ಮೀಗಳ ಕ್ಯಾಸೆಲ್‍ರಾಕ್ ವಲಯವನ್ನು ಕಾಳಿ ಟೈಗರ್ ಡಿಸರ್ವ್‍ಗೆ ಸೇರ್ಪಡೆ ಮಾಡಿ ಆ ಮೂಲಕ ಇದರ ವ್ಯಾಪ್ತಿಯನ್ನು 1,900 ಚ.ಕಿ.ಮೀಗೆ ವಿಸ್ತರಿಸುವ ಯೋಜನೆ ಇದೆ ಎಂದು ಪಾಲಯ್ಯ ವಿವರಿಸಿದ್ದಾರೆ.

WhatsApp Image 2018-02-08 at 8.46.08 AM WhatsApp Image 2018-02-08 at 8.46.09 AM

Facebook Comments

Sri Raghav

Admin