ಸ್ಪೆಸ್- ಎಕ್ಸ್ ನಂತೆ ಪುನರ್ಬಳಕೆ ರಾಕೆಟ್‍ ಸೃಷ್ಟಿಯತ್ತ ಇಸ್ರೋ ಚಿತ್ತ

ಈ ಸುದ್ದಿಯನ್ನು ಶೇರ್ ಮಾಡಿ

Space-X

ಬೆಂಗಳೂರು, ಫೆ.8-ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಅತಿದೊಡ್ಡ ರಾಕೆಟ್-ಫಾಲ್ಕನ್ ಹೇವಿಯನ್ನು ಅಮೆರಿಕದ ಸ್ಪೆಸ್‍ಎಕ್ಸ್ ಸಂಸ್ಥೆ ಯಶಸ್ವಿಯಾಗಿ ಉಡಾವಣೆ ಮಾಡಿ ದೊಡ್ಡಮಟ್ಟದಲ್ಲಿ ಯಶಸ್ಸು ಸಾಧಿಸಿರುವ ಬೆನ್ನಲ್ಲೇ ಇದೇ ಮಾದರಿಯಲ್ಲಿ ಮರುಬಳಕೆ ರಾಕೆಟ್ ತಂತ್ರಜ್ಞಾನದ ಸೃಷ್ಟಿಯತ್ತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಗಮನಹರಿಸಿದೆ. ಬಾಹ್ಯಾಕಾಶ ಉಡಾವಣೆ ವೆಚ್ಚಗಳು ಕಡಿಮೆಯಾಗಲಿರುವ ಹಿನ್ನೆಲೆಯಲ್ಲಿ ಇಸ್ರೋ ಈ ತಂತ್ರಜ್ಞಾನವನ್ನು ಉನ್ನತಮಟ್ಟದಲ್ಲಿ ಅಭಿವೃದ್ದಿಗೊಳಿಸಲು ಸದ್ಯದಲ್ಲೇ ಸಿದ್ದತೆಗಳನ್ನು ಕೈಗೊಳ್ಳಲಿದೆ. ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಸಂದರ್ಶನವೊಂದರಲ್ಲಿ ಈ ವಿಷಯ ತಿಳಿಸಿದ್ದಾರೆ. ಸ್ಪೆಸ್‍ಎಕ್ಸ್‍ನ ಫಾಲ್ಕನ್ ಹೇವಿ ರಾಕೆಟ್ ತನ್ನ ಚೊಚ್ಚಲ ಪರೀಕ್ಷಾರ್ಥ ಉಡ್ಡಯನದಲ್ಲೇ ಮಂಗಳ ಗ್ರಹದ ಅಂಗಳಕ್ಕೆ ಹಾರಿ ಅಂತರಿಕ್ಷ ಯಾನದಲ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸಿರುವುದಕ್ಕೆ ಅಮೆರಿಕ ಖಗೋಳ ವಿಜ್ಞಾನಿಗಳನ್ನು ಅವರು ಅಭಿನಂದಿಸಿದ್ದಾರೆ.

ಸ್ಪೆಸ್-ಎಕ್ಸ್ ಮಾದರಿಯಲ್ಲೇ ಹಂತವಾರು ಮರುಬಳಕೆ ರಾಕೆಟ್‍ಗಳ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನಾವು ಗಂಭೀರ ಚಿಂತನೆ ನಡೆಸುತ್ತಿದ್ದೇವೆ. ನಮ್ಮ ಉಪಗ್ರಹ ಉಡಾವಣೆ ವಾಹಕಗಳು ಮತ್ತು ರಾಕೆಟ್‍ಗಳ ಸಾಮಥ್ರ್ಯವನ್ನು ಹೆಚ್ಚಿಸುವುದು ನಮ್ಮ ಪ್ರಥಮಾದ್ಯತೆಯಾಗಿದೆ. ಜಿಎಸ್‍ಎಲ್‍ವಿ ಎಂಕೆ-3(ಇಸ್ರೋದ ಫ್ಯಾಟ್ ಬಾಯ್)ರ ಎತ್ತುವಿಕೆ ಶಕ್ತಿಯನ್ನು ಈಗಿರುವ 4 ಟನ್‍ಗಳಿಂದ 6.5 ಟನ್‍ಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಲಿದ್ದೇವೆ ಎಂದು ಇಸ್ರೋ ಅಧ್ಯಕ್ಷರು ವಿವರಿಸಿದ್ದಾರೆ.

ಅಮೆರಿಕದ ಫ್ಲಾರಿಡಾದ ಕೇಪ್ ಕೆನಡಿ ಸೆಂಟರ್‍ನಲ್ಲಿ ನಿನ್ನೆ ದೈತ್ಯಾಕಾರದ ರಾಕೆಟ್ ಕೆಂಪುಗ್ರಹದತ್ತ(ಮಂಗಳನತ್ತ) ಯಶಸ್ವಿಯಾಗಿ ಉಡಾವಣೆಯಾಗಿತ್ತು.
ಈ ಬೃಹತ್ ರಾಕೆಟ್ ಮಂಗಳನ ಕಕ್ಷೆ ಬಳಿ ಅಧ್ಯಯನ ಮತ್ತು ಸಂಶೋಧನೆ ನಡೆಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲೊನ್ ಮಾಸ್ಕ್ ಅಭಿವೃದ್ದಿಗೊಳಿಸಿರುವ ಚೆರಿ ರೆಡ್ ಟೆಲ್ಸಾ ರೋಡ್‍ಸ್ಟೆರ್ ಎಂಬ ಕ್ರೀಡಾಕಾರನ್ನು ಕೊಂಡ್ಯೊಯ್ದಿದೆ. ಈ ರಾಕೆಟ್‍ನಲ್ಲಿರುವ ಎಲ್ಲ ಮೂರು ಬೂಸ್ಟರ್ ರಾಕೆಟ್‍ಗಳನ್ನು ಮತ್ತೆ ಉಪಯೋಗಿಸುವಂತೆ ಅತ್ಯಾಧುನಿಕ ತಂತ್ರಜ್ಞಾನದಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

Facebook Comments

Sri Raghav

Admin