ಪಾಕ್ ನ ಐಎಸ್‍ಐಗೆ ಮಾಹಿತಿ ನೀಡುತ್ತಿದ್ದ ಭಾರತೀಯ ವಾಯುಪಡೆ ಅಧಿಕಾರಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ISIS-ofof

ನವದೆಹಲಿ, ಫೆ.9- ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆ-ಐಎಸ್‍ಐಗಾಗಿ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಗೂಢಚರ್ಯೆ ಮಾಡುತ್ತಿದ್ದ ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಪಾಕಿಸ್ತಾನಕ್ಕೆ ಅತ್ಯಂತ ರಹಸ್ಯ ದಾಖಲೆಪತ್ರಗಳನ್ನು ಒದಗಿಸಿದ ಆರೋಪದ ಮೇಲೆ ಗ್ರೂಪ್ ಕ್ಯಾಪ್ಟನ್ ಅರುಣ್ ಮರ್ವಾರ್ ಅವರನ್ನು ದೆಹಲಿ ಪೊಲೀಸ್‍ನ ವಿಶೇಷ ಘಟಕದ ಅಧಿಕಾರಿಗಳು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಭಾರತೀಯ ವಾಯು ಪಡೆಯ ಕಾರ್ಯಾಚರಣೆಗಳ ವಿವರ ಒಳಗೊಂಡ ದಾಖಲೆಪತ್ರಗಳನ್ನು ಐಎಸ್‍ಐಗೆ ಕ್ಯಾಪ್ಟನ್ ಅರುಣ್ ಸೋರಿಕೆ ಮಾಡಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಈ ಸಂಬಂಧ ಅಧಿಕಾರಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.

ಗಡಿಯಲ್ಲಿ ಭಾರತೀಯ ಭದ್ರತಾ ಪಡೆಗಳ ಬಿರುಸಿನ ದಾಳಿಯಿಂದಾಗಿ ಭಾರತದ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲು ಪಾಕಿಸ್ತಾನದ ಐಎಸ್‍ಐಗೆ ತೀವ್ರ ಕಷ್ಟವಾಗುತ್ತಿದ್ದು, ತನ್ನ ಅಧಿಕಾರಿಗಳು ಮತ್ತು ಯೋಧರ ಸಾವು-ನೋವಿನ ಬಗ್ಗೆ ಆತಂಕಗೊಂಡಿದೆ. ಭಾರತದ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಹನಿಟ್ರ್ಯಾಫ್ (ಮೋಹದ ಬಲೆ) ಸೇರಿದಂತೆ ವಿವಿಧ ಆಮಿಷವೊಡ್ಡಿ ಭಾರತೀಯ ಅಧಿಕಾರಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು ರಹಸ್ಯ ಮಾಹಿತಿ ಪಡೆಯಲು ಹುನ್ನಾರ ನಡೆಸುತ್ತಿದೆ.

Facebook Comments

Sri Raghav

Admin