ತಾನೇ ಜನ್ಮ ನೀಡಿದ ಮಗುವನ್ನು ತಿಪ್ಪೆಗೆಸೆದ ನಿರ್ದಯಿ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

Baby--01

ಚಿಕ್ಕಬಳ್ಳಾಪುರ, ಫೆ.10-ಆಗ ತಾನೇ ಹಡೆದ ಶಿಶುವನ್ನು ನಿರ್ದಯಿ ತಾಯಿಯೊಬ್ಬಳು ತಿಪ್ಪೆಗುಂಡಿಗೆ ಎಸೆದು ಹೋಗಿರುವ ಘಟನೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ನಡೆದಿದೆ. ಕಳೆದ ರಾತ್ರಿ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಮಹಿಳೆಯೊಬ್ಬರು ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಇಲ್ಲಿಂದ ನಾಪತ್ತೆಯಾಗಿದ್ದರು.

ಪೊಲೀಸ್ ಠಾಣೆ ಪಕ್ಕದ ತಿಪ್ಪೆಗುಂಡಿಯಲ್ಲಿ ಮಗುವಿನ ಅಳುವ ಶಬ್ಧ ಕೇಳಿದ ಸಾರ್ವಜನಿಕರೊಬ್ಬರು ಹತ್ತಿರ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಸಹಾಯವಾಣಿಗೆ ಕರೆ ಮಾಡಲಾಗಿದ್ದು, ಮಗುವನ್ನು ರಕ್ಷಿಸಿ ಹತ್ತಿರದ ಬಾಲಮಂದಿರದಲ್ಲಿರಿಸಲಾಗಿದೆ. ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin