ಬೇಷರತ್ ಆಗಿ ಕಾಂಗ್ರೆಸ್’ನ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತೇನೆ : ಆನಂದ್‍ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Anand-Singh--01

ಬಳ್ಳಾರಿ, ಫೆ.10- ಯಾವುದೇ ಪೂರ್ವ ಷರತ್ತುಗಳಿಲ್ಲದೆ ತಾವು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಪಕ್ಷದ ಗೆಲುವಿಗೆ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತೇನೆ ಎಂದು ವಿಜಯನಗರ(ಹೊಸಪೇಟೆ) ಕ್ಷೇತ್ರದ ಶಾಸಕ ಆನಂದ್‍ಸಿಂಗ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇರುತ್ತಿರುವುದು ಅತ್ಯಂತ ಸಂತಸವಾಗಿದೆ. ಶಾಸಕ ಸ್ಥಾನದ ನಿರೀಕ್ಷೆಯಿಲ್ಲದೆ ಪಕ್ಷ ಸೇರಿದ್ದೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ. ಮುಂದಿನ ದಿನಗಳಲ್ಲಿ ಬಳ್ಳಾರಿಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಲು ಪ್ರಯತ್ನಿಸುತ್ತೇನೆ ಎಂದರು.  ರಾಷ್ಟ್ರದ ಪ್ರಭಾವಿ ನಾಯಕ ರಾಹುಲ್‍ಗಾಂಧಿ ಅವರಿಗೆ ವಾಲ್ಮೀಕಿ ಅವರ ಪುತ್ಥಳಿ ನೀಡಲಾಗುವುದು ಎಂದು ತಿಳಿಸಿದರು.

Facebook Comments

Sri Raghav

Admin