ಮುದ್ದು ಮಕ್ಕಳ ಜೀವ ತೆಗೆದ ಚುಚ್ಚುಮದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

 

Babies--01
ಮಂಡ್ಯ, ಫೆ.10- ಅಂಗನವಾಡಿಯಲ್ಲಿ ನೀಡಿದ ಚುಚ್ಚುಮದ್ದಿನಿಂದ ಅಸ್ವಸ್ಥಗೊಂಡ ಮಕ್ಕಳ ಪೈಕಿ ಎರಡು ಹಸುಗೂಸುಗಳು ಸಾವನ್ನಪ್ಪಿದ್ದು, ನಾಲ್ಕು ಮಕ್ಕಳು ಗಂಭೀರ ಸ್ಥಿತಿಯಲ್ಲಿರುವ ಘಟನೆ ಗರೀಬಿ ಕಾಲೋನಿಯ ಚನ್ನಗಿರಿದೊಡ್ಡಿ ಗ್ರಾಮದಲ್ಲಿಂದು ನಡೆದಿದೆ. ಗ್ರಾಮದ ಅಂಗನವಾಡಿಯಲ್ಲಿ ಗುರುವಾರದಂದು ಒಂಭತ್ತು ಮಕ್ಕಳಿಗೆ ಪೆಂಟಾ ಇನ್‍ಜೆಂಕ್ಷನ್ ನೀಡಲಾಗಿತ್ತು. ಅದೇ ದಿನವೇ ಒಂದು ಮಗುವಿಗೆ ಜ್ವg ಕಾಣಿಸಿಕೊಂಡಿತ್ತು. ನಿನ್ನೆ ಇತರೆ ಮಕ್ಕಳಲ್ಲೂ ಜ್ವರ ಉಲ್ಬಣಿಸಿ ಅಸ್ವಸ್ಥಗೊಂಡು ಎರಡು ಮಕ್ಕಳು ಅಸುನೀಗಿವೆ.

ಚುಚ್ಚುಮದ್ದು ಪಡೆದ ಇತರೆ ಮಕ್ಕಳು ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಪೋಷಕರು ವಿಮ್ಸ್ ಆಸ್ಪತ್ರೆಗೆ ದಾಖಲಾಗಿಸಿದ್ದು , ಎರಡು ಕಂದಮ್ಮಗಳ ಸಾವಿನಿಂದಾಗಿ ಗ್ರಾಮದ ಸೇರಿದಂತೆ ಆಸ್ಪತ್ರೆ ಬಳಿಯೂ ಆತಂಕದ ವಾತಾವರಣ ನಿರ್ಮಾಣವಾಗಿದೆ.   ವೈದ್ಯರು ಮಕ್ಕಳ ಸಾವಿನ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಕೂಡಲೇ ಕ್ರಮ ವಹಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇನ್ನು ಮಕ್ಕಳ ಸಾವಿನಿಂದ ನೊಂದ ಕುಟುಂಬಗಳು ಆಸ್ಪತ್ರೆ ಬಳಿಯೇ ಪ್ರತಿಭಟನೆ ನಡೆಸುತ್ತಿರುವ ಜೊತೆಗೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವೈದ್ಯರ ನಿರ್ಲಕ್ಷ್ಯ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ:
ಮಂಡ್ಯದಲ್ಲಿ ನಡೆದಿರುವ ಹಸುಗೂಸುಗಳ ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‍ಕುಮಾರ್ ತಿಳಿಸಿದ್ದಾರೆ.   ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಾಗಿದೆ. ಹಿರಿಯ ಅಧಿಕಾರಿಗಳಿಂದ ವರದಿ ಕೇಳಿದ್ದೇವೆ. ಮೃತ ಮಕ್ಕಳ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದ್ದಾರೆ.

ಡಿಎಚ್‍ಒ ಸ್ಪಷ್ಟನೆ:
ಇನ್‍ಜೆಕ್ಷನ್‍ನನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಅದರ ವರದಿ ಬಂದ ನಂತರ ಕಾರಣ ತಿಳಿಯಲಿದೆ ಎಂದು ಡಿಎಚ್‍ಒ ಮೋಹನ್‍ಕುಮಾರ್ ತಿಳಿಸಿದ್ದಾರೆ. ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಂಜುಳಾ, ಎಸ್ಪಿ ರಾಧಿಕಾ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.

Facebook Comments

Sri Raghav

Admin