ಶ್ರವಣಬೆಳಗೊಳದಲ್ಲಿ ಸೌಧರ್ಮ ಇಂದ್ರ ಇಂದ್ರಾಣಿಯರು 1008 ಅಭಿಷೇಕ

ಈ ಸುದ್ದಿಯನ್ನು ಶೇರ್ ಮಾಡಿ

sharvanabelagola-2

ಶ್ರವಣಬೆಳಗೋಳ, ಫೆ.10- ಮಹಾಮಸ್ತಕಾಭಿಷೇಕದ ಅಂಗವಾಗಿ ಹಮ್ಮಿಕೊಂಡಿರುವ ಪಂಚಕಲ್ಯಾಣೋತ್ಸವದಲ್ಲಿ ನಿನ್ನೆ ಆದಿನಾಥ ತೀರ್ಥಂಕರರಿಗೆ ಜನ್ಮ ಕಲ್ಯಾಣದ ಅಂಗವಾಗಿ ಸೌಧರ್ಮ ಇಂದ್ರ ಇಂದ್ರಾಣಿಯರು 1008 ಮಹಿಳೆಯರಿಂದ ಅಭಿಷೇಕ ಜರುಗಿತು. ಪಂಚ ಕಲ್ಯಾಣೋತ್ಸವದ ಅಂಗವಾಗಿ ಪ್ರತಿನಿತ್ಯ ಪೂಜಾ ಕಾರ್ಯಗಳು ಜರುಗುತ್ತಿದ್ದು, ನಿನ್ನೆ ಮುಖ್ಯವೇದಿಕೆ ಎದುರುಗಡೆ ಇರುವ ಪಾಂಡುಕ ಶಿಲೆಯ ಮೇಲೆ ಆದಿನಾಥ ತೀರ್ಥಂಕರರಿಗೆ ಅಭಿಷೇಕ ಜರುಗಿತು.
ಸೌಧರ್ಮ ಇಂದ್ರ ಇಂದ್ರಾಣಿಯರಾದ ಗೌಹಾತಿಯ ಭಾಗ್‍ಚಂದ್ ಸುನೀತಾ ದೇವಿ ಚೂಡಿವಾಲಾರವರು ಐರಾವತದಲ್ಲಿ ಆದಿನಾಥ ತೀರ್ಥಂಕರರರ ಮೂರ್ತಿಯನ್ನು ಪಂಚಕಲ್ಯಾಣದ ಸಂಸ್ಕಾರ ಮಂಟಪದಿಂದ ಮೆರವಣಿಗೆಯಲ್ಲಿ ಕರೆತಂದರು.

ಜನ್ಮಕಲ್ಯಾಣ:
ತೀರ್ಥಂಕರ ಬಾಲಕನ ಜನ್ಮವಾದ ಸೌಧರ್ಮ ಇಂದ್ರಾದಿ ದೇವತೆಗಳು ಅವಧಿ ಜ್ಞಾನದ ಮೂಲಕ ತಿಳಿದು ಪರೋಕ್ಷವಾಗಿ ನಮಸ್ಕರಿಸಿ ಭಗವಂತನ ಜನ್ಮ ಸ್ಥಳಕ್ಕೆ ಸಾಗುತ್ತಾರೆ. ಅಲ್ಲಿ ಇಂದ್ರಾಣಿಯು ತೀರ್ಥಂಕರರ ಮಾತೆಗೆ ಸ್ವಲ್ಪವೂ ಕಷ್ಟ ನೀಡದೆ ಅವಳ ಬಳಿ ತೀರ್ಥಂಕರ ಮಾಯಾ ಶಿಶುವನ್ನು ಇರಿಸಿ ತೀಂರ್ಥಂಕರ ಬಾಲಕನನ್ನು ಕರೆತಂದು ಸೌಧರ್ಮೇಂದ್ರನಿಗೆ ನೀಡುತ್ತಾಳೆ. ಆ ಶಿಶುವನ್ನು ಐರಾವತ ಆನೆ ಮೇಲೆ ಕುಳ್ಳಿರಿಸಿ ಮೆರಮಣಿಗೆ ಮೂಲಕ ಪಾಂಡುಕ ಶಿಲೆಮೇಲೆ ಕುಳ್ಳಿರಿಸಿ ಕ್ಷೀರಸಾಗರದ ಜಲವನ್ನು ರತ್ನಮಯ, ಸ್ವರ್ಣಮಯ 1008 ಕಳಶಗಳಿಂದ ತಂದು ತನ್ನ ಪರಿವಾರದೊಡನೆ ಜನ್ಮಾಭಿಷೇಕ ಮಾಡುತ್ತಾನೆ. ನಂತರ ಬಾಲಕನನ್ನು ನವ ವಸ್ತ್ರದ ಆಭರಣಗಳಿಂದ ಅಲಂಕರಿಸಿ ಆತನ ಹೆಸರು ಮತ್ತು ಚಿಹ್ನೆಯನ್ನು ನಿರ್ಣಯಿಸಿ ಆತನ ತಂದೆ ತಾಯಿಗಳಿಗೆ ಸಮರ್ಪಿಸುತ್ತಾನೆ. ಮೆರವಣಿಗೆಯಲ್ಲಿ ತಲಾ 108 ಶಂಖಗಳು, ಘಂಡೆಗಳು, ನಗಾರಿಗಳು, ಕೊಂಬು ಕಹಳೆಗಳು, ಮೈಸೂರು ಬ್ಯಾಂಡ್ ಸೆಟ್, ಮಂಗಳವಾದ್ಯ, ಧರ್ಮಧ್ವಜ, ಸ್ಯಾಕ್ಸ್ ಫೋನ್ ಹಾಗೂ ಸ್ಥಬ್ಧಚಿತ್ರಗಳು ಗಮನ ಸೆಳೆದವು. ನಂತರ ಆಚಾರ್ಯರಿಂದ ಮಂಗಳ ಪ್ರವಚನ ನಡೆಯಿತು.

Facebook Comments

Sri Raghav

Admin