ಶ್ರವಣಬೆಳಗೊಳದಲ್ಲಿ 12000 ಕಲಶ ಮೆರವಣಿಗೆಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

sharvanabelagola

ಶ್ರವಣಬೆಳಗೊಳ: ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ 88 ನೇ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಜನ್ಮಕಲ್ಯಾಣದ ಪ್ರಯುಕ್ತ 12000 ಕಲಶ ಮೆರವಣಿಗೆಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಚಾಲನೆ ನೀಡಿದರು. ಗೊಮ್ಮಟನಗರದ ಪಾಲಿಟೆಕ್ನಿಕ್ ಕಾಲೇಜಿನ ಮುಂಭಾಗದಿಂದ ಆದಿನಾಥ ತೀರ್ಥಂಕರ ಜನ್ಮಕಲ್ಯಾಣ ಮೆರವಣಿಗೆಯು ಆರಂಭಗೊಂಡು, ಚಿಕ್ಕ ಬೆಟ್ಟದ ಮುಖ್ಯರಸ್ತೆಯಲ್ಲಿ ಮಂಗಳ ವಾಧ್ಯಗಳೊಂದಿಗೆ ಸಾಗಿತು, ಜನ್ಮಕಲ್ಯಾಣ ಮಹೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 12 ರಿಂದ 15 ಸಾವಿರ ಮಹಿಳೆ ಹಾಗೂ ಪುರುಷರು ಕಳಶ ಹೊತ್ತು ಜತೆಗೆ ಧರ್ಮಧ್ವಜ ಹಿಡಿದು ಜಿನಧ್ಯಾನದೊಂದಿಗೆ ಸಾಗಿದರು.

ಮೆರವಣಿಗೆಯಲ್ಲಿ 108 ಶಂಖಗಳು, ಘಂಟೆಗಳು, ನಗಾರಿಗಳು, ಕೊಂಬು ಕಹಳೆಗಳು, ಮೈಸೂರು ಬ್ಯಾಂಡ್ ಸೆಟ್, ಮಂಗಳವಾದ್ಯ, ಧರ್ಮಧ್ವಜ, ಸ್ಯಾಕ್ಸ್ ಫೋನ್ ಹಾಗೂ ಸ್ಥಬ್ಧಚಿತ್ರಗಳು ಗಮನ ಸೆಳೆದವು, ಮೆರವಣಿಗೆಯು ಸರಿಸುಮಾರು 3 ಕಿಮೀ ಉದ್ದವಿದ್ದು, ಒಂದೊಂದು ತಂಡವು ತಮ್ಮದೇ ಆದ ಸಮವಸ್ತ್ರ ಧರಿಸಿತ್ತು. ಬಳಿಕ ಮೆರವಣಿಗೆಯು ಪಂಚಕಲ್ಯಾಣ ನಗರಕ್ಕೆ ಆಗಮಿಸಿದ್ದು, ನಗರದಲ್ಲಿ ನಿರ್ಮಾಣವಾಗಿರುವ ಪಾಂಡುಕ ಶಿಲೆಯಲ್ಲಿ ತೀರ್ಥಂಕರ ಸಿದ್ದವುಗೆ ಅಭಿಷೇಕ ನೆರವೇರಿತು, ನಂತರ ಆಚಾರ್ಯರಿಂದ ಮಂಗಳ ಪ್ರವಚನ ನಡೆಯಿತು, ಶಾಸಕ ಸಿ.ಎನ್.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್ ಹಾಗೂ ಇತರರಿದ್ದರು.

ಫಲ ವಿತರಣೆ: ಮೆರವಣಿಗೆಯಲ್ಲಿ ಸುಮಾರು 3 ಕಿಮೀ ನಡೆದು ಬಂದ ಸುಮಾರು 12 ಸಾವಿರಕ್ಕು ಕಲಶಧಾರಿಗಳಿಗೆ ಹಾಗೂ ಭಕ್ತಾದಿಗಳಿಗೆ ಕುಡಿಯಲು ಎಳನೀರು, ಕಿತ್ತಳೆ, ಕಲ್ಲಂಗಡಿ, ಬಾಳೆಹಣ್ಣು ಹಾಗೂ ಮೋಸಂಬಿ ಹಣ್ಣುಗಳನ್ನು ಉಚಿತವಾಗಿ ವಿತರಿಸಲಾಯಿತು, ಹಾಸನದಿಂದ 1 ವ್ಯಾನ್‍ನಲ್ಲಿ ದಾನಿಯೊಬ್ಬರು ಫಲಬುತ್ತಿಯನ್ನು ಕಳಿಸಿಕೊಟ್ಟಿದ್ದು, ಸಂದರ್ಭದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟಾರಕ ಸ್ವಾಮಿಜಿಯವರು ಮೆರವಣಿಗೆಯಲ್ಲಿ ದಣಿದು ಬಂದವರಿಗೆ ಭಕ್ತರನ್ನು ಸತ್ಕರಿಸಲು ಅವರೇ ಮುಂದಾದರು.

Facebook Comments

Sri Raghav

Admin